ಮೈಸೂರು: ಇದೇ ತಿಂಗಳ ನ.8 ರಿಂದ 19ರವರೆಗೆ ಈಜಿಪ್ಟಿನ ಕರೋದಲ್ಲಿ ನಡೆಯುತ್ತಿರುವ 2023ರ ಸಿಟ್ಟಿಂಗ್ ವಾಲಿಬಾಲ್ ವಿಶ್ವಕಪ್ ಗೆ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಂಬಲಾರ ಗ್ರಾಮದ ರೈತಾಪಿ ಕುಟುಂಬದ ಟಿ.ಗಣೇಶ್ ಯುವಕನನ್ನು ನಮ್ಮೂರು ನಮ್ಮೋರು ಟ್ರಸ್ಟ್ನಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರನ್ನು ಸನ್ಮಾನಿಸಿದ ನಮ್ಮೂರು ನಮ್ಮೋರು ಟ್ರಸ್ಟ್ ಅಧ್ಯಕ್ಷ ಸತೀಶ್ಗೌಡ ಬೀಡನಹಳ್ಳಿ ಮಾತನಾಡಿ, ವಿಕಲತೆಯನ್ನು ಮೆಟ್ಟಿ ಕ್ರೀಡಾ ಸಾಧನೆ ತೋರಿರುವ ಗಣೇಶ್ ಅವರ ಸಾಧನೆ ಕೇವಲ ಮೈಸೂರು ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇಂದು ಸಾಕಷ್ಟು ಕ್ರೀಡಾ ಸಾಧಕರು ಅವಕಾಶ ವಂಚಿತರಾಗಿದ್ದಾರೆ. ಎಲ್ಲಾ ಅಂಗಗಳು ಸುಸ್ಥಿತಿಯಲ್ಲಿರುವ ಜನರೇ ಇಂದು ಕ್ರೀಡೆಯಿಂದ ಕ್ರೀಡಾ ಮನೋಭಾವದಿಂದ ಹಿಂದೆ ಸರಿಯುವ ಸನ್ನಿವೇಶವನ್ನು ಇಂದು ನಾವು ಸಮಾಜದಲ್ಲಿ ಕಾಣಬಹುದಾಗಿದೆ. ಇಂತಹ ವೇಳೆ ಗಣೇಶ್ ಅವರ ಸಾಧನೆ ಮಾದರಿಯಾಗಿದೆ. ಇವರ ಸಾಧನೆಗೆ ವೈಯಕ್ತಿಕವಾಗಿ 50ಸಾವಿರರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿರುವುದಾಗಿ ಹೇಳಿದರು.
ಘೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಟ್ರಸ್ಸಿನ ಉಪಾಧ್ಯಕ್ಷ ಕುಮಾರ್ ಗೌಡ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎ.ರವಿ, ಮುಖಂಡರಾದ ಅಭಿಷೇಕ್ ಗೌಡ, ನಾಗೇಂದ್ರ ಇನ್ನಿತರರು ಉಪಸ್ಥಿತರಿದ್ದರು.