ಮೈಸೂರು: ಗಂಡು ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೆಚ್ಡಿ ಕೋಟೆ ತಾಲೂಕಿನ ಸೋನಹಳ್ಳಿಯಲ್ಲಿ ನಡೆದಿದೆ.
ಚಂದ್ರು ಎಂಬಾತ ತನ್ನ ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದು,ಕೃತ್ಯಕ್ಕೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ.
ಶಿವಮ್ಮಗೆ ಎರಡು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕು ಎಂದು ಕಿರುಕುಳ ನೀಡಲಾಗುತ್ತಿತ್ತು.ಇದೇ ಕಾರಣಕ್ಕಾಗಿ ಪ್ರತಿ ನಿತ್ಯ ಪತಿ ಮತ್ತು ಕುಟುಂಬಸ್ಥರು ಮಾನಸಿಕ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಹಲವು ಬಾರಿ ರಾಜಿ ಪಂಚಾಯತಿ ಕೂಡ ಆಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಕಿರುಕುಳ ತಾಳಲಾರದೆ ಕಳೆದ ವರ್ಷ ಎಚ್.ಡಿ.ಕೋಟೆ ಪೆÇಲೀಸರಿಗೆ ಶಿವಮ್ಮ ದೂರು ನೀಡಿದ್ದರು. ಸದ್ಯ ಪತಿ ಚಂದ್ರು ಬಂಧನವಾಗಿದ್ದು ಮಾವ ರಾಮೇಗೌಡ, ಅತ್ತೆ ಕೆಂಪಮ್ಮ ತಲೆ ಮರೆಸಿಕೊಂಡಿದ್ದು, ಹೆಚ್.ಡಿ.ಕೋಟೆ ಪೆÇಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮರದಿಂದ ಬಿದ್ದು ಸಾವು:
ಹುಣಸೂರು ತಾಲೂಕಿನ ಹೊನ್ನಿಕುಪ್ಪೆ ಗ್ರಾಮದಲ್ಲಿ ತೆಂಗಿನ ಮರದಿಂದ ಬಿದ್ದು ಯುವ ರೈತಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಹೊನ್ನಿಕುಪ್ಪೆಯ ನವೀನ್ಕುಮಾರ್ (28) ಮೃತ ರೈತನಾಗಿದ್ದಾರೆ. ತೆಂಗಿನ ಮರದಿಂದ ಕಾಯಿ ಕೀಳುವ ವೇಳೆ ತೆಂಗಿನ ಗರಿ ಸಮೇತ ನವೀನ್ ಕೆಳಗೆ ಬಿದ್ದಿದ್ದಾರೆ. ತಕ್ಷಣ ನವೀನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹುಣಸೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.