ಚಾಮರಾಜನಗರ:- ಒಂಟಿ ಸಲಗವೊಂದುಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿರುವ ಘಟನೆಚಾಮರಾಜನಗರಗಡಿ ಭಾಗವಾದ ತಮಿಳುನಾಡಿನ ಸಂತರದೊಡ್ಡಿಗ್ರಾಮದಲ್ಲಿ ನಡೆದಿದೆ.
ಆಹಾರ ಹುಡುಕುತ್ತ ದಿಢೀರನೇಗ್ರಾಮಕ್ಕೆಎಂಟ್ರಿಕೊಟ್ಟಗಜರಾಜನನ್ನುಕಂಡಜನರು, ದಿಕ್ಕುಪಾಲಾಗಿ ಓಡಿಹೋದರು. ಜೊತೆಗೆ, ಕಬ್ಬು, ಬಾಳೆ ಫಸಲನ್ನು ನಾಶಪಡಿಸಿದ್ದು, ಅನೇಕ ವಸ್ತುಗಳನ್ನು ಧ್ವಂಸ ಮಾಡಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆನೆಯನ್ನುಕಾಡಿಗೆಅಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲೂ ಆನೆ ಅವಾಂತರ, ಈಗ ಗ್ರಾಮದಲ್ಲೂ ಆನೆ ಹಾವಳಿ ಎಂದುಹಾಸನೂರು ಸುತ್ತಮುತ್ತಲಿನ ಗ್ರಾಮಸ್ಥರುಆತಂಕ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ನಾಲ್ರೋಡ್ಚೆಕ್ ಪೆÇೀಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ಮಾಡಿ ಬೈಕ್ಜಖಂ ಮಾಡಿರುವಘಟನೆಜೂನ್ 9 ರಂದು ನಡೆದಿತ್ತು. ತಮಿಳುನಾಡಿನಿಂದ ಕರ್ನಾಟಕಕ್ಕೆಆಗಮಿಸುತ್ತಿದ್ದ ಬೈಕ್ ಸವಾರನ ಮೇಲೆ ಮರಿ ಆನೆ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಭಯಭೀತರಾದ ಬೈಕ್ ಸವಾರ, ವಾಹನವನ್ನುಅಲ್ಲೇ ಬಿಟ್ಟು ಪರಾರಿಯಾಗಿದ್ದ.
ಈಗ ಒಂಟಿ ಸಲಗವೊಂದುದಾಂಧಲೆ ಮಾಡಿರುವುದುಅಕ್ಕಪಕ್ಕದಗ್ರಾಮಸ್ಥರು ಭಯಭೀತರಾಗಿದ್ದಾರೆ.