ಹನೂರು: ಲೊಕ್ಕನಹಳ್ಳಿ ಹೋಬಳಿಯ ಚಿಕ್ಕಮಾಲಪುರ ಗ್ರಾಮ ಪಂಚಾಯ್ತಿಯ ಕಗ್ಗಳಿ ಗುಂದ್ಧಿ ಆದಿವಾಸಿಗಳ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ರಾತ್ರಿ 8:30 ರ ಸಮಯದಲ್ಲಿ ಅದೇ ಗ್ರಾಮದ ರಾಮ ಲಲಿತಾ ದಂಪತಿಯ ಎರಡನೇ ಪುತ್ರಿ ಸುಶೀಲ ಎಂಬ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6 ವರ್ಷದ ಬಾಲಕಿಯು ತನ್ನ ಮನೆಯ ಮುಂದೆ ಇರುವ ಚಕೋತ ಹಣ್ಣಿನ ಮರದ ಹತ್ತಿರ ಆಟ ಆಡುತ್ತಿದ ಸಂದರ್ಭದಲ್ಲಿ ಕಾಡಿನಿಂದ ಬಂಧ್ಹ ಚಿರತೆಯೊಂದು ಮಗುವನ್ನು ಕಚ್ಚಿಕೊಂಡು ಕಾಡಿನ ಕಡೆ ಎಳೆದು ಕೊಂಡು ಹೋಗುವ ಸಂದರ್ಭದಲ್ಲಿ ,ಆಟ ಆಡುತಿದ ಮಗಳು ಇಲ್ಲಾ ಎಂದು ನೋಡಿದಾಗ ಆ ಸ್ಥಳದಲ್ಲಿ ಸುರಿದಿದ್ದ ರಕ್ತದ ಕಲೆಗಳನ್ನು ನೋಡಿ ಶಬ್ಧ ಮಾಡಿ ಗ್ರಾಮದ ಎಲ್ಲರೂ ಜೋರಾಗಿ ಕೂಗಿ ಕೊಂಡಾಗ ಕಾಡಿಗು ಗ್ರಾಮಕೂ ಮಧ್ಯ ತೊಡಲಾಗಿದ್ದ ಆನೆಯ ಗುಂಡಿಯೊಳಗೆ ಮಗುವನ್ನು ಬಿಟ್ಟು ಚಿರತೆ ಕಾಡಿನ ಒಳಗೆ ಓಡಿಹೋಗಿದೆ, ನಂತರ ಗ್ರಾಮದವರೆಲ್ಲ ಸೇರಿ ಆಂಬುಲೆನ್ಸ್ ಮೂಲಕ ಸಮೀಪದ ಕಾಮಗೆರೆಯ ಹೋಲಿ ಕ್ರಾಸ್ ಹಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ,ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ 20 ದಿನಗಳಿಂದ ಚಿಕಿತ್ಸೆ ಪಡೆಯುತಿದ್ದ 6 ವರ್ಷದ ಬಾಲಕಿ ಶುಶೀಲಾ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.