ತಾಲೂಕು ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಜವಾಬ್ದಾರಿಯಿಂದ ಕೆಲಸ ಮಾಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ಪಂ ಉಪ ಕಾರ್ಯದರ್ಶಿ ಡಾ ಕೃಷ್ಣಂ ರಾಜು
ನಂಜನಗೂಡು ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇಂದು ಮೊದಲ ಸಾಮಾನ್ಯ ಸಭೆಯನ್ನು ಪಂಚಾಯತಿ ಉಪ ಕಾರ್ಯದರ್ಶಿ ಡಾಕ್ಟರ್ ಕೃಷ್ಣಂ ರಾಜು ಮತ್ತು ತಾಲೂಕು ಪಂಚಾಯಿತಿ Eo ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಅಧಿಕಾರಗಳ ಸಭೆ ನಡೆಯಿತು
ಡಾ ಕೃಷ್ಣಂ ರಾಜು ಮಾತನಾಡಿ ಎಲ್ಲಾ ಇಲಾಖೆಗಳಿಗೆ 145.16 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಅಧಿಕಾರಿಗಳು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಇದು ಖಡಕ್ ಸೂಚನೆ ನೀಡಿದರು
ಇದು ಮುಖ್ಯಮಂತ್ರಿ ಜಿಲ್ಲೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಈ ಜಿಲ್ಲೆಯಲ್ಲಿ ಉತ್ತಮ ಕೆಲಸ ಆಗದಿದ್ದರೆ ನಾವು ಉತ್ತರ ನೀಡಲು ಆಗುವುದಿಲ್ಲ ಆದ್ದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ನಾವು ನೀವು ಕೈಜೋಡಿಸಿ ನಿಗದಿತ ಸಮಯದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು
ಸಾರ್ವಜನಿಕರು ಕೆಲಸಗಳಿಗೆ ಕಚೇರಿಗಳಿಗೆ ಬಂದರೆ ಅವರನ್ನು ಅಲೆದಾಡಿಸಬೇಡಿ ಸಣ್ಣಪುಟ್ಟ ಗೊಂದಲಗಳು ಇದ್ದರೆ ಸರಿಪಡಿಸಿಕೊಂಡು ಕೆಲಸಗಳನ್ನು ಮಾಡಿಕೊಡಿ ಎಂದು ಸೂಚಿಸಿದರುಮುಂದಿನ ಸಭೆಗಳಲ್ಲಿ ಕುಂಟು ನೆಪ ಯಾರು ಕೂಡ ಹೇಳಬಾರದು ಕಾಮಗಾರಿ ಪೂರ್ಣಗೊಂಡಿದ್ದೇವೆ ಎಂಬುದು ಉತ್ತರ ಬರಬೇಕು ನಾನು ಕೂಡ ಸ್ಥಳಕ್ಕೆ ಬರುತ್ತೇನೆ ಎಲ್ಲ ಇಲಾಖೆ ಅಧಿಕಾರಿಗಳಿಗೆ ಉತ್ತಮ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು