ಕೆ.ಆರ್.ಪೇಟೆ:ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 9 ಆರೋಪಿ
ಗಳನ್ನು ಬಂಧಿಸಿ ಪಣಕ್ಕೆ ಇಟ್ಟಿದ 1,37,810 ಹಣವನ್ನು ವಶಕ್ಕೆ ಪಡೆದಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಹೇಮಾವತಿ ಕಾಲುವೆ ಏರಿಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಸುಮಾರು 10 ಮಂದಿ ಹಲವು ಊರುಗಳಿಂದ ಬಂದು ಅಂದರ್,ಬಾಹರ್ ಜೂಜು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ.ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಮಧು,ನಾಗರಾಜು,ಪ್ರಶಾಂತ ಕುಮಾರ್,ರೇವಣ್ಣ, ಪಿ,ಚಂದ್ರಶೇಖರ,ಪ್ರಕಾಶ, ವಿರೂಪಾಕ್ಷರ ಸಮ್ಮುಖದಲ್ಲಿ ದಾಳಿ ನಡೆಸಿದ್ದಾರೆ.ಪೊಲೀಸರನ್ನು ನೋಡಿದ ಹಲವು ಆರೋಪಿಗಳು ಅಲ್ಲಿಂದ ಓಡಿ ಹೊದರು,ಆದರೆ 9 ಮಂದಿ ಜೂಜು ಕೊರರನ್ನು ಬಂಧಿಸಿ ಮತ್ತು ಪಣಕಿಟ್ಟಿದ್ದ 1,37,810 ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಸಾರ್ವಜನಿಕರು ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.