ನಂಜನಗೂಡು : ನನ್ನ ತಂದೆಯ ಹಾದಿಯಲ್ಲೇ ಸಾಗಿ ಜನಸೇವೆ ಮಾಡಬೇಕೆಂಬ ಸಂಕಲ್ಪದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ದಿನದ 24 ಗಂಟೆಗಳಲ್ಲೂ ಕೂಡ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವ ಮೂಲಕ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಶಾಸಕ ದರ್ಶನ್ಧ್ರುವನಾರಾಯಣ ಹೇಳಿದರು.
ಅವರು ತಾಲೂಕಿನ ಹೆಡತಲೆ, ಸಿಂಗಾರಿಪುರ, ಶ್ರೀನಗರ, ಬಸವಟ್ಟಿಗೆ ಗ್ರಾಮಗಳಲ್ಲಿ ಜನಸ್ಪಂಧನೆ ಸಭೆ ಮತ್ತು ಮತದಾರರಿಗೆ ಕೃತಜ್ಞತೆ ಸಭೆಯನ್ನು ನಡೆಸಿ ಮಾತನಾಡಿದರು. ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ನನ್ನ ತಂದೆ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಅವರು ಸೋತಿದ್ದರೂ ಸಹ ಜನರ ಸಮಸ್ಯೆಗಳಿಗೆ ಸದಾ ಸ್ಪಂಧಿಸಿ ಕೆಲಸ ಮಾಡುತ್ತಿದ್ದರು. ಆದ ಕಾರಣ ಕ್ಷೇತ್ರದ ಜನರೂ ಸಹ ಅವರ ಮೇಲೆ ವಿಶೇಷ ಪ್ರೀತಿ ಅಭಿಮಾನವನ್ನು ಹೊಂದಿದ್ದೀರಿ. ಅವರ ಮೇಲಿನ ಪ್ರೀತಿ ಅಭಿಮಾನವನ್ನು ಅವರ ಸಾವಿನ ನಂತರ ನನಗೆ ಎಲ್ಲಾ ತಾಯಂದಿರು ಮಹಿಳೆಯರು ಪ್ರೀತಿಯನ್ನು ತೋರಿಸಿ ಹೆಚ್ಚಿನ ಬೆಂಬಲ ನೀಡಿ ಒಂದು ಐತಿಹಾಸಿಕ ಗೆಲುವಿನ ಉಡುಗೊರೆ ನೀಡಿರುವುದಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದರು.
ತಂದೆ ಆಸೆ ಈಡೇರಿಸಲು ಶ್ರಮಿಸುತ್ತೇನೆ: ನನ್ನ ತಂದೆ ಕ್ಷೇತ್ರದಾದ್ಯಂತ ಸುತ್ತಾಡಿ ಸಮಸ್ಯೆ ಗುರ್ತಿಸಿ ಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ರೂಪಿಸಬೇಕೆಂಬ ಆಸೆ ಹಂಬಲ ಹೊಂದಿದ್ದರು. ಅವರ ಆಸೆ ಈಡೇರಿಸಲು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಇಡೀ ಕ್ಷೇತ್ರದ ಎಲ್ಲಾ ಗ್ರಾಮಗಳ ಮನೆ ಮನೆಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿ ಗ್ರಾಮಗಳಿಗೆ ಆಗಬೇಕಿರುವ ಅಭಿವೃದ್ದಿ ಕೆಲಸಗಳನ್ನು ಪಟ್ಟಿ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಜೊತೆಗೆ ನಮ್ಮದೇ ಸರ್ಕಾರವಿರುವ ಕಾರಣದಿಂದ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದು ಕ್ಷೇತ್ರದಲ್ಲಿ ಶಾಶ್ವತವಾದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ ಎಂದರು.
ತಂದೆ ಆಸೆ ಈಡೇರಿಸಲು ಶ್ರಮಿಸುತ್ತೇನೆ: ದರ್ಶನ್ಧ್ರುವನಾರಾಯಣ
ಸಾರ್ವಜನಿಕರಿಗೆ ಸದಾ ಸಿಗುತ್ತೇನೆ: ತಂದೆ ತಾಯಿಯನ್ನು ಕಳೆದುಕೊಂಡಿರುವ ನನಗೆ ಕ್ಷೇತ್ರದ ಜನರೇ ತಂದೆ ತಾಯಿಗಳು ಪ್ರತಿಯೊಬರ ಮನೆ ಮಗನಾಗಿ ಸೇವೆ ಸಲ್ಲಿಸಲು ನಾನು ಸದಾ ಸಿದ್ದನಿದ್ದೇನೆ ಸಾರ್ವಜನಿಕರು ನನ್ನನ್ನು ಖುದ್ದಾಗಿ ಅಥವಾ ದೂರವಾಣಿ ಮೂಲಕ ನೇರವಾಗಿ ನನ್ನನ್ನು ಸಂಪರ್ಕಿಸಬಹದು ದೂರು ಅಹವಾಲು ಸಲ್ಲಿಸಬಹುದು. ಅಲ್ಲದೆ ತಾ.ಪಂ ಕಚೇರಿಯಲ್ಲಿ ಶೀಘ್ರದಲ್ಲೇ ಶಾಸಕರ ಕಚೇರಿ ತೆರೆಯಲಿದ್ದು ಅಲ್ಲಿಯೂ ಕೂಡ ಬೇಟಿಯಾಗಬಹುದು ಸಾರ್ವಜನಿಕರಿಗೆ ಸದಾ ಸಿಗುತ್ತೇನೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕುರಹಟ್ಟಿಮಹೇಶ್, ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿನಾಯಕ, ಜಿ.ಪಂ ಮಾಜಿ ಸದಸ್ಯೆ ಲತಾಸಿದ್ದಶೆಟ್ಟಿ, ಮುಖಂಡರಾದ ವಿಜಯ್ಕುಮಾರ್, ಶ್ರೀನಿವಾಸಮೂರ್ತಿ, ಸಿಂಗಾರಿಪುರ ನಾಗರಾಜಯ್ಯ, ಕಳಲೆ ರಾಜೇಶ್, ಉಪ್ಪಿನಹಳ್ಳಿ ಶಿವಣ್ಣ, ಹೆಡತಲೆ ನಾಗರಾಜು, ಕುಳ್ಳಯ್ಯ, ಶಿವಕುಮಾರ್, ಕಾರ್ಮಿಕ ಮುಖಂಡ ಗೋವಿಂದರಾಜು, ಯುವ ಕಾಂಗ್ರೇಸ್ ಅಧ್ಯಕ್ಷ ಅಶೋಕ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿಂ, ಸೇರಿದಂತೆ ಗ್ರಾಮದ ಯಜಮಾನರು ಗ್ರಾಪಂ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.