ಮೂರು ವರ್ಷದ ಬಾಲಕಿಯೊಬ್ಬಳು ಬೋರ್ವೆಲ್ಗೆ ಬಿದ್ದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ಅಲ್ಲಿನ ಕಾಸರ್ ಗ್ರಾಮದ ಬಳಿಕ ಸೋಮವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ.
ಸೌಮ್ಯ ಎಂದು ಗುರುತಿಸಲಾದ ಮಗು ಸಂಜೆ 5 ಗಂಟೆ ಸುಮಾರಿಗೆ ಬೋರ್ವೆಲ್ ಒಳಗೆ ಬಿದ್ದಿದೆ. ಕೃಷಿ ಜಮೀನಿನಲ್ಲಿ ಆಟವಾಡುತ್ತಾ ಹೋಗಿ ಕೊನೆಗೆ ಬೋರ್ವೆಲ್ನಲ್ಲಿ ಸಿಲುಕಿಕೊಂಡಿದೆ. 250 ಅಡಿ ಆಳದ ಬೋರ್ವೆಲ್ ಇದಾಗಿದ್ದು, ಮಗು 25 ಅಡಿದಲ್ಲಿ ಸಿಲುಕೊಂಡಿತ್ತು.
ಮಗು ಬೋರ್ವೆಲ್ಗೆ ಬಿದ್ದಂತೆ ಮನೆಯವರು ರಕ್ಷಣಾ ತಂಡಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಮಗುವನ್ನು ಬೋರ್ವೆಲ್ನಿಂದ ಮೇಲಕ್ಕೆತ್ತಲು ಪ್ರಯತ್ನಿಸಿದೆ. ಸುಮಾರು 5 ಗಂಟೆಗಳ ಕಾರ್ಯಾಚರಣೆಯ ಬಳಿಕ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಮಗುವನ್ನು ಸೌಮ್ಯ ಸದ್ಯದ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದುಬಂದಿದೆ. ಸದ್ಯ ತುರ್ತು ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಸೌಮ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ.