ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದೊಂದಿಗೆ ಸಿಗರೇಟು, ಟೀ ಕುಡಿಯುತ್ತಿರುವ ಫೋಟೋ ವೈರಲ್ ಆಗಿದೆ. ಮಾಧ್ಯಮಗಳು ನಟನ ಪೋಟೋವನ್ನು ಬಿತ್ತರಿಸಿವೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಖುದ್ದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಜೈಲು ಸೇರಿದ್ದಾರೆ. ಕಳೆದ ಮೂರು ತಿಂಗಳಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆದರೆ ಜೈಲಿನ ಒಳಗೆ ನಟನಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋಗಳು ಮತ್ತು ವಿಡಿಯೋ ಕರೆ ಮಾನಾಡಿರುವ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೈದಿಯೊಬ್ಬ ಜೈಲಿನ ಹೊರಗಿರುವ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿ, ದರ್ಶನ್ ಅವರಿಂದ ಹಾಯ್ ಹೇಳಿಸಿದ್ದಾನೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ದರ್ಶನ್ಗೆ ಜೈಲಿನಲ್ಲಿ ಆತಿಥ್ಯ ನೀಡಿದ್ದಕ್ಕೆ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ವಿಚಾರ ನಿನ್ನೆ ಗೊತ್ತಾಯಿತು. ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರೂ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಜೈಲಿನ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಜೈಲಿನಲ್ಲಿ ಅಮಾನತು ಆದ ಅಧಿಕಾರಿಗಳು
ಶರಣವಸವ ಅಮಿನಾಗಾಡ್
ಪ್ರಭು.ಎಸ್ ಖಂಡೇಲ್ ವಾಲ್
ಅಸಿಸ್ಟೆಂಟ್ ಜೈಲರ್ಗಳು- ಎಲ್.ಎಸ್ ತಿಪ್ಪೇಸ್ವಾಮಿ ಹಾಗೂ ಶ್ರೀಕಾಂತ್ ತಳವಾರು
ಹೆಡ್ ವಾರ್ಡ್ಸ್- ವೆಂಕಪ್ಪ ಕೊರ್ತಿ ಹಾಗೂ ಸಂಪತ್ ಕುಮಾರ್ ಕಡಾಪಟ್ಟಿ
ವಾರ್ಡರ್- ಬಸಪ್ಪ ತೇಲಿ