ಮೈಸೂರು: ನನ್ನ ಪತ್ನಿಗೆ ಸೈಟು ನೀಡಿರುವ ವಿಚಾರ ಹಗರಣವೇ ಅಲ್ಲ. ನನ್ನ ಪ್ರಕರಣ ಹಗರಣ ಅಲ್ಲವೇ ಅಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾವು ಮುಡಾ ಕ್ಲೀನ್ ಮಾಡುತ್ತೇವೆ. ನನ್ನ ಕೇಸ್ ಬೇರೆ ಅವರ ಕೇಸ್ ಬೇರೆ. ನನ್ನ ಕೇಸ್ ನಲ್ಲಿ ನನ್ನ ಜಮೀನನ್ನು ಉಪಯೋಗ ಮಾಡಿದ್ದಾರೆ. ಜಮೀನು ಕೊಟ್ಟು ತೆಗೆದುಕೊಳ್ಳುವುದು ಬೇರೆ. ನಮ್ಮ ಜಮೀನು ಅವರೇ ಒತ್ತುವರಿ ಮಾಡಿರೋದು ಈಗ ತನಿಖೆ ಮಾಡಲು ಹೇಳಿದ್ದೇನೆ ಎಂದು ತಿಳಿಸಿದರು.
ದುರುಪಯೋಗ ತಡೆಯಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ. ಮುಡಾದವರು ತಾವೇ ತಪ್ಪು ಮಾಡಿ ನಮಗೆ ಸೈಟು ಕೊಟ್ಟಿದ್ದಾರೆ. ಭೂಮಿ ಕಳೆದುಕೊಂಡ ನಾವು ಪರಿಹಾರ ಕೆಳಬೇಕಾ ಬೇಡ್ವಾ ? ಅದಕ್ಕೆ ಏನು ಮಾಡ್ಬೇಕು
ಅದಕ್ಕೆ ಬದಲಿ ನಿವೇಶನ ಕೇಳಿದ್ದಾರೆ. ನಾವೇನು ಇಂತಹ ಕಡೆ ಕೊಡಿ ಅಂತ ಕೇಳಿಲ್ಲ. ಅವರದೇ ಸರ್ಕಾರ ಇತ್ತು ಅವರ ಕಾಲದಲ್ಲಿ ಕೊಟ್ಟರೆ ಯಾರು ಜವಾಬ್ದಾರಿ? ಸಿದ್ದರಾಮಯ್ಯ ಜವಾಬ್ದಾರಿನಾ ಒಂದು ವೇಳೆ ತಪ್ಪಾಗಿದ್ರೆ ಸೈಟು ತೆಗೆದುಕೊಳ್ಳಲಿ ಎಂದರು.
ನಮಗೆ ನಮ್ಮ ಜಮೀನು ದುಡ್ಡು ಕೊಡಲಿ. ನಾನು ಆ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದೆ. ನಾನೇನು ಅಶೋಕ ತರ ಕೆಲಸ ಮಾಡ್ತೀನಾ ? ಪರೋಕ್ಷವಾಗಿ ಆರ್.ಅಶೋಕ್ ಗೆ ಮಾತಿನಲ್ಲೇ ತಿವಿದ ಸಿಎಂ ಸಿದ್ದರಾಮಯ್ಯ.