ಶ್ರೀಹರಿಕೋಟ: ಸೂರ್ಯ ಕಿರಣಗಳೇ ಬೀಳದ ಚಂದ್ರನ ಕತ್ತಲೆಯ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮುಂದಿನ ಬಾಹ್ಯಾಕಾಶ ಸಾಹಸಕ್ಕೆ ಸಿದ್ದವಾಗಿದ್ದು, ಬಹು ನಿರೀಕ್ಷೆಯ ಆದಿತ್ಯಾ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ದೇಶದ ಮೊದಲ ಸೌರ ಮಿಷನ್ ಆದಿತ್ಯ-ಐ1 ಗಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿದ್ದು, ಈಗಾಗಲೇ ಉಪಗ್ರಹ ಉಡಾವಣೆಯ ಅಂತಿಮ ಮತ್ತು ಅಧಿಕೃತ ಕ್ಷಣಗಣನೆ ಆರಂಭವಾಗಿದೆ. ಸೂರ್ಯಯಾನ ಉಡಾವಣೆಯು ಶನಿವಾರ ಅಂದರೆ ನಾಳೆ ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದ ಲಾಂಚ್ ಪ್ಯಾಡ್ನಿಂದ ನಿಗದಿಯಾಗಿದೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ತಪಾಸಣೆ ಎಲ್ಲವೂ ಪೂರ್ಣಗೊಂಡಿದೆ.
ಆದಿತ್ಯ-ಐ1 ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯವಾಗಿದ್ದು, ಈ ಉಪಗ್ರಹವನ್ನು ಇಸ್ರೋದ PSಐಗಿ-ಅ57 ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗುತ್ತಿದೆ. ಈ ಆದಿತ್ಯಾ ಎಲ್ 1 ಉಪಗ್ರಹವು ಸೂರ್ಯನ ವಿವರವಾದ ಅಧ್ಯಯನವನ್ನು ಹೊಂದಲು ಏಳು ವಿಭಿನ್ನ ಪೇಲೋಡ್ಗಳನ್ನು ಒಯ್ಯುತ್ತದೆ. ಅದರಲ್ಲಿ ನಾಲ್ಕು ಸೂರ್ಯನ ಬೆಳಕನ್ನು ವೀಕ್ಷಿಸುತ್ತದೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯುತ್ತದೆ.