ಮೈಸೂರು: ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ವೀರ ಸಾವರ್ಕರ್ ರವರ 140ನೇ ಜಯಂತಿಯ ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತರಾದ ಶ್ರೀ ಎಸ್.ಎಲ್.ಭೈರಪ್ಪನವರು ಉಪಸ್ಥಿತರಿರಲಿದ್ದಾರೆ. ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆರವರು ಉಪನ್ಯಾಸ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಖ್ಯಾತ ಇತಿಹಾಸ ತಜ್ಞರು ಹಾಗು ಲೇಖಕರಾದ ಶ್ರೀ ವಿಕ್ರಂ ಸಂಪತ್ ರವರಿಗೆ “ವೀರ ಸಾವರ್ಕರ್ ಸಮ್ಮಾನ್” ಪ್ರಶಸ್ತಿಯನ್ನು ಪ್ರತಿಷ್ಠಾನದ ವತಿಯಿಂದ ನೀಡಿ ಪುರಸ್ಕರಿಸಲಾಗುತ್ತದೆ.
ಇದಕ್ಕೂ ಮುಂಚೆ 3 ಗಂಟೆಯಿಂದ ರಕ್ತಧಾನ ಶಿಬಿರ ಜೊತೆಗೆ ಸಾವರ್ಕರ್ ಕುರಿತಾದ 8 ವರ್ಷದ ಒಳಗಿನ ಮಕ್ಕಳಿಗೆಛದ್ಮವೇಷ, ಎಂಟು ವರ್ಷದ ಮೇಲ್ಪಟ್ಟ ಚಿತ್ರಕಲೆ ಹಾಗೂ ರೀಲ್ಸ್ ಮತ್ತು ವೀಡಿಯೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಈಗಾಗಲೇ ಕಾರ್ಯಕ್ರಮದ ಪ್ರಚಾರ ವಾಹನಗಳಿಗೆ ಸಂಸದರಾದ ಶ್ರೀ ಪ್ರತಾಪ ಸಿಂಹ ಚಾಲನೆ ನೀಡಿದ್ದೂ, ಅವು ನಗರದಾದ್ಯಂತ ಸುತ್ತುತ್ತಾ ಜನರನ್ನು ಆಹ್ವಾನಿಸುತ್ತಿದೆ. ಭೀತ್ತಿಪತ್ರವನ್ನು ಶಾಸಕ ಟಿ.ಎಸ್.ಶ್ರೀವತ್ಸ ಬಿಡುಗಡೆಗೊಳಿಸಿ ಶುಭಕೋರಿದ್ದಾರೆ.
ದಯಮಾಡಿ ಈ ಎಲ್ಲಾ ಕಾರ್ಯಕ್ರಮಗಳ ಕುರಿತು ತಮ್ಮ ಘನ ಪತ್ರಿಕೆ/ವಾಹಿನಿಗಳಲ್ಲಿ ಪ್ರಕಟಿಸಬೇಕೆಂದು ತಮ್ಮನ್ನು ಕೋರುತ್ತೇವೆ, ಜೊತೆಗೆ ಕಾರ್ಯಕ್ರಮಕ್ಕೆ ವರದಿಗಾರರು ಹಾಗೂ ಛಾಯಾಚಿತ್ರಗ್ರಾಹಕರನ್ನು ಕಳುಹಿಸಿಕೊಡಬೇಕೆಂದು ಕೋರುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಪ್ರತಿಷ್ಠಾನ, ಮೈಸೂರು ಅಧ್ಯಕ್ಷರಾದ ಡಾ| ಎಸ್.ಯಶಸ್ವಿನಿ, ಕಾರ್ಯದರ್ಶಿ ಎಸ್.ಎಂ. ರಜತ್, ಸದಸ್ಯರಾದ ರಾಕೇಶ್ ಭಟ್, ಕೆ.ಎಂ.ನಿಶಾಂತ್, ಶಿವಕುಮಾರ್ ಭಾಗವಹಿಸಿದ್ದರು.