ಮೈಸೂರು:- ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಮೈಸೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೆಳಿಗ್ಗೆ ಎಂಟು ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮತದಾರರು ಸರತಿಯ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸುತ್ತಿದ್ದಾರೆ. ಸಂಜೆ ಆರು ಗಂಟೆಯವರೆಗೆ ಮತದಾನ ನಡೆಯಲಿದೆ.
ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಇಂದು ಮತಗಟ್ಟೆ ಸಂಖ್ಯೆ 139, ಸಿಎಫ್ ಟಿ ಆರ್ ಐ ಶಾಲೆಯಲ್ಲಿ ಮತದಾನ ಮಾಡಿದರು.
ಪೆÇಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ಕೂಡ ಮತದಾನ ಮಾಡಿದರು. ಕೃಷ್ಣರಾಜವಿಧಾನಸಭಾ ಕ್ಷೇತ್ರದಲ್ಲಿನ ಮತಗಟ್ಟೆಯೊಂದರಲ್ಲಿ 90ವರ್ಷದ ವೃದ್ಧೆಯೋರ್ವರು ಮತಗಟ್ಟೆಗೆಬಂದು ಮತಚಲಾಯಿಸಿದರು. ಅವರು ತಮ್ಮ ಚಪ್ಪಲಿ ತೆಗೆದಿಟ್ಟು ಮತಚಲಾಯಿಸಿದ್ದು ವಿಶೇಷವಾಗಿತ್ತು. ಬಳಿಕ ಮಾತನಾಡಿದ ಅವರು ಎಲ್ಲರಿಗೂಒಳ್ಳೆಯದಾಗಲಿ ಎಂದು ಮತಚಲಾಯಿಸಿದ್ದೇನೆ. ನನಗೆ ಮತದ ಹಕ್ಕು ದೊರೆತಂದಿನಿಂದ ಮತಚಲಾಯಿಸುತ್ತಿದ್ದೇನೆ ಎಂದರು.
ಮತದಾನಕ್ಕೂ ಮುನ್ನ ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಸಿದ್ದರಾಮನಹುಂಡಿ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಈ ವೇಳೆ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ, ಮುಂದಿನ ಪ್ರಧಾನಮಂತ್ರಿ ಸಿದ್ದರಾಮಯ್ಯನವರಿಗೆ ಜೈ ಎಂಬ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ಜೊತೆಗಿದ್ದರು.
ಬಳಿಕ ಕುಟುಂಬ ಸಮೇತ ಸಿದ್ದರಾಮನಹುಂಡಿಯಲ್ಲಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಬಳಿಕ ಮಾತನಾಡಿದ ಅವರು ಎಲ್ಲ ಮತದಾರರು ಮತ ಚಲಾಯಿಸಬೇಕು. ರಾಜ್ಯದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮತಚಲಾಯಿಸಬೇಕು. ಯಾರು ಪ್ರಜಾಪ್ರಭುತ್ವ ಉಳಿಸ್ತಾರೆ, ಯಾರು ಸಂವಿಧಾನ ಉಳಿಸ್ತಾರೆ, ಯಾರು ರಾಜ್ಯ ಅಭಿವೃದ್ಧಿ ಮಾಡ್ತಾರೆ ಅವರಿಗೆ ಮತಹಾಕಬೇಕು ಎಂದರು. ಬಿಜೆಪಿಯವರಿಗೆ ಮತದಾರರ ಬಳಿ ಹೋಗಲು ಹಣ ಬಿಟ್ಟರೆ ಬೇರೆ ಏನಿದೆ? ಏನಂತ ಹೇಳುತ್ತಾರೆ ಹೋಗಿ. ಇವತ್ತಿನವರೆಗೆ ಒಂದು ಮನೆ ಕೊಡಕ್ಕಾಗಿಲ್ಲ, 7ಕೆಜಿ ಅಕ್ಕಿ ನಾಲ್ಕು ಕೆಜಿ ಮಾಡಿದ್ದಾರೆ. ಏನೂ ಅಭಿವೃದ್ಧಿ ಮಾಡಿಲ್ಲ. ನಾಲ್ಕು ವರ್ಷದಲ್ಲಿ ಅವರ ಸಾಧನೆ ಶೂನ್ಯ ಹಾಗಾಗಿ ದುಟ್ಟಿನ ಮೂಲಕ ಚುನಾವಣೆಯನ್ನು ಗೆಲ್ಲಬೇಕು ಎಂದು ಬಿಜೆಪಿಯವರು ಪ್ರಯತ್ನ ಮಾಡ್ತಿದ್ದಾರೆ. ಬೆಲೆಯೇರಿಕೆ ಬಗ್ಗೆ ಮಾತಾಡಿದ್ದಾರಾ? ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರಾ? ನರೇಂದ್ರ ಮೋದಿಯವರು ಬಂದು ಹೇಳಿದ ತಕ್ಷಣ ಯಾಕೆ ಮತ ಹಾಕ್ತಾರೆ? ಕಾಂಗ್ರೆಸ್ 130ಕನಿಷ್ಠ 150ಸ್ಥಾನಗಳ ಗೆಲುವು ಸಾಧಿಸಲಿದೆ ಎಂದರು.
ಚಾಮರಾಜನಗರದಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪತ್ನಿಯೊಂದಿಗೆ ತೆರಳಿ ಮತದಾನ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಯವೇಳೆಗೆ 19.07ಶೇ.ರಷ್ಟು ಮತದಾನವಾಗಿದೆ.