ಮೈಸೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಕ್ರಾಫರ್ಡ್ ಹಾಲ್ ಎದುರುಗಡೆ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಸುಭಾಷ್ ಮಾತನಾಡಿ
ಮೈಸೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳ ತರಗತಿಗಳು ಇತ್ತೀಚಗಷ್ಟೆ ಪ್ರಾರಂಭವಾಗಿದ್ದು, ಕೇವಲ 2 ತಿಂಗಳುಗಳಾಗಿವೆ. ಯಾವುದೇ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪಾಠಗಳು ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತರಾತುರಿಯಲ್ಲಿ ಪರೀಕ್ಷೆಗಳನ್ನು ನಡೆಸುವ ವಿವಿಯ ನಿರ್ಧಾರದಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಜೊತೆಗೆ ಪರೀಕ್ಷೆಗಳಿಗೆ ಯಾವುದೇ ರೀತಿ ಕಾಲಾವಕಾಶ ನೀಡದೆ ಅತ್ಯಂತ ತರಾತುರಿಯಲ್ಲಿ ಪರೀಕ್ಷೆಯನ್ನು ಮಾಡಲು ಮುಂದಾಗಿದ್ದಾರೆ ಇದು ಅತ್ಯಂತ ವಿದ್ಯಾರ್ಥಿ ವಿರೋಧಿ ಧೋರಣೆಯಾಗಿದೆ. ಇದಲ್ಲದೇ ಸೆಮಿಸ್ಟರ್ ಅಂದರೆ 4 ತಿಂಗಳುಗಳು ಸಂಪೂರ್ಣವಾಗಿ ತರಗತಿಗಳು ನಡೆಯಬೇಕಾಗಿತ್ತು. ಈ ರೀತಿಯಾಗದೇ ಕೇವಲ 2 ತಿಂಗಳುಗಳು ಪಾಠ ನಡೆಸಿ ಪರೀಕ್ಷೆ ಗಳನ್ನು ನಡೆಸುವುದು ಅಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿಗಳಿಗೆ ಇದು ಅನಾನುಕೂಲವಾಗುತ್ತದೆ.
ಮಹಾರಾಜ ಕಾಲೇಜನ್ನು ಚುನಾವಣೆಗೆ ಕೂಡ ಬಳಸಿಕೊಳ್ಳಲಾಗಿದೆ. ಹಾಗಾಗಿ ಸರಿಯಾಗಿ ಪಾಠ ಪ್ರವಚನಗಳು ನಡೆದಿಲ್ಲ,ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 15 ದಿನಗಳಾದರೂ ಪರೀಕ್ಷೆಗಳನ್ನು ಮುಂದೂಡಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ AIDSO ಸಂಘಟನೆಯ ಪದಾಧಿಕಾರಿಗಳಾದ ನಿತಿನ್, ಚಂದ್ರಿಕಾ, ಚಂದನ, ಹೇಮ, ರಕ್ಷಿತಾ ಹಾಗೂ ವಿದ್ಯಾರ್ಥಿಗಳಾದ ಚೇತನ್, ನಾಗರಾಜ್, ವಿಜಯ್,ರಾಜು, ಸುಹೇಲ್,ಸಂತೋಷ್, ಶಿವು, ರತನ್, ಸುನಿಲ್ ಹಾಗೂ ಮಹಾರಾಜ, ಮಹಾರಾಣಿ, ವಿದ್ಯಾವರ್ಧಕ, ಶಾರದಾ ವಿಲಾಸ ಹಾಗೂ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು