ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್ನಲ್ಲಿ ನಡೆದ ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ‘ಮೋದಿಯವರ ಮೂರನೇ ಬಾರಿಯ ಪ್ರಧಾನಿಯ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮೂಲಕ ಜಗತ್ತಿನ ಮುಂದೆ ಹೆಮ್ಮೆಯಿಂದ ತೆಲೆ ಎತ್ತಿ ನಿಲ್ಲಲಿದೆ’ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಎರಡು ದಶಕಗಳ ಹಿಂದೆಯೇ ‘ವೈಬ್ರೆಂಟ್ ಗುಜರಾತ್’ ಅನ್ನು ರೂಪಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವಿಂದು ಕಾಣಬಹುದು. ಸ್ವಾವಲಂಬಿ ಮತ್ತು ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಪಾತ್ರವು ತುಂಬಾ ಮಹತ್ವದ್ದಾಗಿದೆ. ನವ ಕಲ್ಪನೆಗಳು, ನಾವೀನ್ಯತೆ ಮತ್ತು ಹೂಡಿಕೆಯ ಮೂಲಕ, ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ ಗುಜರಾತ್ ಮಾತ್ರವಲ್ಲದೆ ಇಡೀ ದೇಶದ ಆರ್ಥಿಕತೆಯನ್ನು ಬಲಪಡಿಸಿದೆ. ದಶಕಗಳ ಕಾಲ,ಗುಜರಾತ್ನಲ್ಲಿ ಆಡಳಿತ ನೀಡಿದ ಮೋದಿ-ಶಾ ಜೋಡಿಯು ಗುಜರಾತನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಶ್ರಮಿಸಿದರು, ಮತ್ತು ಈ ಗುಜರಾತ್ ಅಭಿವೃದ್ದಿ ಮಾದರಿಯ ಆಧಾರದ ಮೇಲೆಯೇ ದೇಶದ ನಾಗರಿಕರು ಮೋದಿಯವರಿಗೆ ರಾಷ್ಟ್ರದ ಅಧಿಕಾರ ಹಸ್ತಾಂತರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಂದು ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಉತ್ಪಾದನೆ ಮತ್ತು ಹೂಡಿಕೆಗೆ ಭಾರತವು ಅತ್ಯಂತ ನೆಚ್ಚಿನ ತಾಣವಾದರೆ, ಭಾರತದೊಳಗೆ ಗುಜರಾತ್ ಅತ್ಯಂತ ನೆಚ್ಚಿನ ತಾಣವಾಗಿದೆ.
ಪ್ರಧಾನಿಯವರ ನಾಯಕತ್ವದಲ್ಲಿ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ ನವ ಕಲ್ಪನೆಗಳು ಮತ್ತು ನಾವೀನ್ಯತೆಗೆ ವೇದಿಕೆಯನ್ನು ಒದಗಿಸುವ ಮೂಲಕ ರಾಜ್ಯದೊಳಗೆ ಹೂಡಿಕೆಯನ್ನು ತರಲು ಕೆಲಸ ಮಾಡಿದೆ. ಇದು ಗುಜರಾತ್ ಮಾತ್ರವಲ್ಲದೇ ಇಡೀ ದೇಶದ ಆರ್ಥಿಕತೆಗೆ ಪ್ರಯೋಜನ ನೀಡಿದೆ. ಈ ಕಾರಣಕ್ಕಾಗಿಯೇ ದೇಶದ ಹಲವು ರಾಜ್ಯಗಳು ವೈಬ್ರಂಟ್ ಗುಜರಾತ್ ಮಾದರಿಯನ್ನು ತಮ್ಮ ಕೈಗಾರಿಕಾ ಅಭಿವೃದ್ಧಿಗಾಗಿ ಅಳವಡಿಸಿಕೊಂಡಿವೆ. ಮೋದಿಯವರು ಗುಜರಾತ್ಅನ್ನು ಒಳ್ಳೆಯ ನೀತಿ ಚಾಲಿತ ರಾಜ್ಯವನ್ನಾಗಿ ಮಾಡಿದರು, ಅದರಿಂದಾಗಿ ಇಂದು ಪ್ರಪಂಚದಾದ್ಯಂತದ ಹೂಡಿಕೆದಾರರು ಆ ನೀತಿಗಳಿಂದ ಆಕರ್ಷಿತರಾಗಿ ಗುಜರಾತ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಗುಜರಾತ್ ಭಾರತದ ಅಭಿವೃದ್ಧಿಯ ಹೆಬ್ಬಾಗಿಲಾಗಿದೆ.
ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕತೆಯು ಜಗತ್ತಿನ 11 ನೇ ಸ್ಥಾನದಲ್ಲಿತ್ತು ಮತ್ತು ಇಂದು ಒಂದು ದಶಕದ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
ಮೋದಿ ಮತ್ತು ಶಾ ಜೋಡಿ ಭಾರತದ ರಾಜಕೀಯಕ್ಕೆ ಹೊಸ ದಿಕ್ಕನ್ನು ನೀಡಿದ್ದಾರೆ. ಅವರು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹೊಸ ಗುರುತನ್ನು ನೀಡುವುದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಿದರು. ಈ ಎಲ್ಲಾ ಕಾರಣಗಳು ಪ್ರಧಾನಿ ಮೋದಿಯವರು 2024 ರಲ್ಲಿ ಮರಳಿ ಅಧಿಕಾರಕ್ಕೆ ಬರಲಿದ್ದಾರೆ ಎಂಬುದನ್ನು ಸೂಚಿಸುತ್ತದೆ.