ಮೈಸೂರಿನ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ಸೀಸನ್ ನ ಮೊದಲ ಎಲಿಮಿನೇಟ್ ಶ್ಯಾಮ್ ಆಗಿದ್ದಾರೆ ಎನ್ನುವುದು ಸಿಗುತ್ತಿರುವ ಮಾಹಿತಿ. ಆದರೆ, ಶ್ಯಾಮ್ ಮನೆಯಲ್ಲಿ ಇದ್ದರಾ? ಅಥವಾ ನಿಜವಾಗಿಯೂ ಎಲಿಮೇನ್ ಆಗಿ ಹೊರ ಬಂದಿದ್ದಾರಾ ಎನ್ನುವುದು ಇಂದು ಸಂಜೆಯೇ ಕಿಚ್ಚನ ಪಂಚಾಯತಿಯಲ್ಲಿ ತೀರ್ಮಾನವಾಗಲಿದೆ.
ಒಂದು ವಾರದ ಎಪಿಸೋಡ್ ಗಳನ್ನು ನೋಡಿದಾಗ ಸ್ನೇಕ್ ಶ್ಯಾಮ್ ಅಷ್ಟಾಗಿ ಉತ್ಸಾಹದಿಂದ ಇರಲಿಲ್ಲ. ವಯಸ್ಸಿನ ಕಾರಣದಿಂದಾಗಿ ಟಾಸ್ಕ್ ಮಾಡುವುದು ಕೂಡ ಅವರಿಗೆ ಕಷ್ಟದ ಕೆಲಸವೇ. ಮನೆಯಲ್ಲಿರುವವರನ್ನು ಹೋಲಿಸಿದರೆ ಶ್ಯಾಮ್ ಲವಲವಿಕೆಯಿಂದ ಇರುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವರನ್ನು ಮನೆಯಿಂದ ಆಚೆ ಹಾಕಿರಬಹುದಾ? ಗೊತ್ತಿಲ್ಲ. ಯಾಕೆಂದರೆ, ಅವರು ಮನೆಯಿಂದ ಹೊರ ಬಂದಿರುವುದು ನಿಕ್ಕಿ ಆಗಿಲ್ಲ.
ಕಿಚ್ಚನ ಪಂಚಾಯತಿಯಲ್ಲೂ ಗರಂ
ಬಿಗ್ ಬಾಸ್ ಕನ್ನಡ 10ರ ಕಿಚ್ಚನ ಮೊದಲ `ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ವಾಹಿನಿಯು ಪ್ರೋಮೋವನ್ನು ರಿಲೀಸ್ ಮಾಡಿದ್ದು, ಕಿಚ್ಚ ಆಡಿದ ಮಾತುಗಳು ಸಖತ್ ಕುತೂಹಲ ಮೂಡಿಸಿವೆ. `ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡರೆ, ದೇವರೇ ಕ್ಷಮಿಸಿ ಒಂದು ವರ ಕೊಡ್ತಾನೆ’ ಎಂದು ಹೇಳಲಾದ ಮಾತು ವೈರಲ್ ಆಗಿದೆ. ಆ ಮಾತುಗಳನ್ನು ಅವರು ಯಾರಿಗೆ ಹೇಳಿದ್ದಾರೆ ಎನ್ನುವುದು ಪ್ರೊಮೋದಲ್ಲಿ ಬಳಸಲಾದ ದೃಶ್ಯಗಳೇ ಹೇಳುತ್ತವೆ.
ಇಂದು ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯತಿ. ವೀಕೆಂಡ್ ನಲ್ಲಿ ಸುದೀಪ್ ಜೊತೆ ಮಾತನಾಡೋಕೆ ಬಿಗ್ ಬಾಸ್ ಸ್ಪರ್ಧಿಗಳು ತುದಿಗಾಲಲ್ಲಿ ಕಾಯುತ್ತಾರೆ. ವೀಕೆಂಡ್ ಪಂಚಾಯತಿಯಲ್ಲಿ ಭಾಗಿಯಾಗಲೆಂದೇ ಹೊಸ ಹೊಸ ವಿನ್ಯಾಸದ ಕಾಸ್ಟೂ÷್ಯಮ್ ಅನ್ನೂ ರೆಡಿ ಮಾಡಿಕೊಂಡಿರುತ್ತಾರೆ. ಹಾಗಂತ ಕಿಚ್ಚನ ಪಂಚಾಯತಿ, ಯಾವ ವೇಳೆಯಲ್ಲೇ ಹೇಗೆ ಟರ್ನ್ ಆಗತ್ತೋ ಗೊತ್ತಿಲ್ಲ. ನಗುತ್ತಲೇ ಅಳಿಸುತ್ತಾರೆ, ಅಳಿಸುತ್ತಲೇ ನಗಿಸುತ್ತಾರೆ, ಕೋಪ ಬಂದರೆ ಮುಖಾಮೋತಿ ನೋಡದೇ ಉಗಿದು ಬಿಡುತ್ತಾರೆ ಸುದೀಪ್. ಹಾಗಾಗಿ ಕಿಚ್ಚನ ಪಂಚಾಯತಿಗಾಗಿ ಕಿರುತೆರೆ ಪ್ರೇಕ್ಷಕ ಕೂಡ ಕಾದಿರುತ್ತಾನೆ.
ಬಿಗ್ ಬಾಸ್ ಸೀಸನ್ 10ರ ಮೊದಲ ಕಿಚ್ಚನ ಪಂಚಾಯತಿ ಅಂದರೆ, `ವಾರದ ಕಥೆ ಕಿಚ್ಚನ ಜೊತೆ’ ಇಂದು ಆರಂಭವಾಗಿದೆ. ಈಗಾಗಲೇ ಶೂಟಿಂಗ್ ಕೂಡ ನಡೆದಿದ್ದು, ಮನೆಯಲ್ಲಿದ್ದವರ ಮೇಲೆ ಕಿಚ್ಚ ಗರಂ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಬಿಗ್ ಬಾಸ್ ಮನೆಯೊಳಗೆ ಕಂಟೆಸ್ಟೆAಟ್ ಬಂದು ಕೇವಲ ಒಂದು ವಾರವಾಗಿದೆಯಷ್ಟೆ. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇದು ಅತ್ಯಂತ ಕಡಿಮೆ ಸಮಯ. ಆದರೂ, ಡ್ರೋನ್ ಪ್ರತಾಪ್ ಮೇಲೆ ಮನೆಮುಂದಿಯಲ್ಲ ಮುರಿದು ಬಿದ್ದಿದ್ದಾರೆ. ಡ್ರೋನ್ ಪ್ರತಾಪ್ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅವಮಾನಿಸುವಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಇವೆಲ್ಲ ಕಿಚ್ಚನ ಕೋಪಕ್ಕೆ ಕಾರಣವಾಗಿವೆ.
ಡ್ರೋನ್ ಪ್ರತಾಪ್ ತಮ್ಮ ನಿಜ ಜೀವನದಲ್ಲಿ ಏನೇ ಇರಲಿ. ಆದರೆ, ಮನೆಗೆ ಬಂದಾಗ ಇತರರಂತೆ ಅವರೂ ಕೂಡ ಸ್ಪರ್ಧಿ. ಸಮಾಜದಲ್ಲಿ ಅವರಿಗೂ ಅವರದ್ದೇ ಆದ ಸ್ಥಾನವಿದೆ. ಅವರ ಖಾಸಗಿ ಬದುಕನ್ನು ಸಾಕಷ್ಟು ರೀತಿಯಲ್ಲಿ ಕೆದಕಿ ಬಿಗ್ ಬಾಸ್ ಮನೆಯಲ್ಲಿ ಅಪಮಾನ ಮಾಡಲಾಗುತ್ತಿದೆ. ಯಾರೆಲ್ಲ ಡ್ರೋನ್ ಪ್ರತಾಪ್ ರನ್ನು ಅವಮಾನಿಸಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರಂತೆ ಸುದೀಪ್. ಅಲ್ಲದೇ, ಡ್ರೋನ್ ಅವರಿಗೂ ಕಿಚ್ಚ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.