ಮೈಸೂರು: ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸುವಾಗ ಎರಡು ಬಲಿಷ್ಠ ಕೋಮುಗಳನ್ನೇ ಟಾರ್ಗೆಟ್ ಮಾಡಿದ್ದು ಯಾಕೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚುನಾವಣೆಯಲ್ಲಿ ಈ ರಾಜ್ಯದ ಎರಡು ಬಲಿಷ್ಠ ಕೋಮುಗಳನ್ನೇ ಟಾರ್ಗೆಟ್ ಮಾಡಿದ್ಯಾಕೆ? ದಿನೇಶ್ ಗುಂಡೂರಾವ್ ವಿರುದ್ಧನೂ ಕಣಕ್ಕಿಳಿಸಬಹುದಿತ್ತಲ್ವಾ ಎಂದು ಪ್ರಶ್ನಿಸಿದರು. ಯಡಿಯೂರಪ್ಪನವರದ್ದು ತಂದಾನಾ ತಾನಾನ ಅಷ್ಟೇ. ಜಗದೀಶ್ ಶೆಟ್ಟರ್ ಅವರು 6ಬಾರಿ ಗೆದ್ದವರು, ಮಾಜಿ ಮುಖ್ಯಮಂತ್ರಿಗಳು ಟಿಕೇಟ್ ಗಾಗಿ ಕಾಯ್ಕೊಂಡಿದ್ದಾರೆ ಅಂದರೆ ಯಾರೋ ಬಿ.ಎಲ್.ಸಂತೋಷ್ ಅಂತೆ ಅವರು ಟಿಕೇಟ್ ನೀಡುವವರು ಥೂ ಎಂದು ಉಗಿದರು.
ಶ್ರೀನಿವಾಸ ಪ್ರಸಾದ ಹಿರಿಯ ನಾಯಕರಿದ್ದಾರೆ. ನಿನಗ್ಯಾಕೆ ಬೇಕಾಗಿತ್ತಪ್ಪ ಅಂದರು ಸೋಮಣ್ಣ ಅವರಿಗೆ. ಸೋಮಣ್ಣ ಅವರನ್ನು ಬಲಿ ಪಶು ಮಾಡಲಿಕ್ಕೆ ತಾನೇ ಇಲ್ಲಿ ನಿಲ್ಲಿಸಿರೋದು. ಜನರು ತಿಳ್ಕೋಬೇಕು. ಸೋಮಣ್ಣ ಬೇಡ ಅನ್ನೋದಕ್ಕೆ ಆಗಲ್ಲ. ಇದು ಆರ್ ಎಸ್ ಎಸ್ ನ ಷಡ್ಯಂತ್ರ. ಆರ್ ಎಸ್ ಎಸ್ ನವರಿಗೆ ವೀರಶೈವ ಲಿಂಗಾಯತ ಸಾಕು, ನಾಯಕ ಬೇಕಾಗಿಲ್ಲ. ಬೇರೆ ಬೇರೆ ಸಮುದಾಯಗಳ ಮೇಲೆ ಯಾಕೆ ಹಾಕಿಲ್ಲ ನೀವು? ಎರಡು ಬಲಿಷ್ಠ ಕೋಮುಗಳನ್ನೇ ಗುರಿಯಾಗಿಸಿದ್ದು ಯಾಕೆ? ಇಷ್ಟೆಲ್ಲ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಶಾಲು ಹಾಕಿ ಪತ್ನಿ ಜೊತೆ ತಿರುಗುತ್ತಿದ್ದಾರೆ ದೇವಸ್ಥಾನಕ್ಕೆ. ರಾಜ್ಯದಲ್ಲಿ ಏನೆಲ್ಲ ನಡೀತಿದೆ, ಸ್ವಲ್ಪನಾದರೂ ಜವಾಬ್ದಾರಿ ಇದೆಯಾ? ಪ್ರಿಯಾಂಕ್ ಖರ್ಗೆ ಜೊತೆ ಯಾವುದೋರೌಡಿ ಶಿಟರ್ ಗೆ ಟಿಕೇಟ್ ಕೊಟ್ಟಿದ್ದಾರೆ. ಕೇಳಿದರೆ ಪೊಲೀಸ್ ನವರು ಏನೇನೋ ಮಾಡಿದ್ದಾರೆ ಅಂತ ಹೇಳ್ತಾರೆ. ಅಮಾಯಕರನ್ನು ರೌಡಿಶೀಟರ್ ಮಾಡೋ ಕಾರ್ಯ ನಿರಂತರವಾಗಿ ನಿಮ್ಮ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಹರಿಹಾಯ್ದರು.
ಮೀಸಲಾತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ದೋಷಪೂರಿತ, ಜನವಿರೋಧಿ ತೀರ್ಮಾನ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ವರದಿಗಳ ಆಧಾರದ ಮೇಲೆ ಕ್ಯಾಬಿನೆಟ್ ತೀರ್ಮಾನದ ಮೇಲೆ ಆಗಿರೋದು. 18ನೇ ತಾರೀಖು ವಿಚಾರಣೆ ಮುಂದೂಡಿದೆ. ಇದಕ್ಕೆ ಕಾನೂನಿನ ಬಲ ಇಲ್ಲ. ಚುನಾವಣೆಗೋಸ್ಕರ ಮಾಡಿರೋದು ಎಂದರು.