ಮೈಸೂರು: ಸಿಕ್ಕಿರುವ ಹಣ ಹಿಂದಿನ ಬಿಜೆಪಿ ಸರ್ಕಾರದ ಪ್ರಬಲ ಸಚಿವರ ಹಣ ಎಂಬ ಮಾಹಿತಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಯುವ ಸಂದರ್ಭದಲ್ಲಿ ಐಟಿ ದಾಳಿ ಮಾಡುವುದು ಹೊಸದೇನಲ್ಲ. ಬೆಂಗಳೂರಿನ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿದೆ. ನಾಲ್ಕು ಗಂಟೆ ಹಿಂದೆ ಆ ಹಣ ಎಲ್ಲಿತು..?
ಯಾವ ಪಕ್ಷದವರು ಯಾರಿಗಾಗಿ ಹಣ ಇಟ್ಟಿದರು?, ನನಗೆ ಬಂದಿರುವ ಮಾಹಿತಿ ಪ್ರಕಾರ ಅಲ್ಲಿ ಸಿಕಿರುವುದು 42ಕೋಟಿ ಅಲ್ಲ, 200 ಕೋಟಿ ರೂ. ಎಂಬ ಮಾಹಿತಿಯಿದೆ. ಸುಖ ಸುಮ್ಮನೆ ಬಿಜೆಪಿ, ಜೆಡಿಎಸ್ ಹಿಟ್ ಅಂಡ್ ರನ್ ಮಾಡುತ್ತಿವೆ. ಅಲ್ಲಿ ಸಿಕ್ಕಿರುವ ಹಣ ಹಿಂದಿನ ಬಿಜೆಪಿ ಸರ್ಕಾರದ ಪ್ರಬಲ ಸಚಿವರ ಹಣ ಎಂಬ ಮಾಹಿತಿ ಇದೆ.
ಕುಮಾರಸ್ವಾಮಿ ಸತ್ಯಹರಿಶ್ಚಂದ್ರ ಚಂದ್ರರ ಮೊಮ್ಮಗರಂತೆ, ಸುಖ ಸುಮ್ಮನೆ ಎಲ್ಲರ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಕುಮಾರಸ್ವಾಮಿಗೆ ಸುಪಾರಿ ಕೊಟ್ಟು ಇಟ್ಟುಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಲು ಅಮಿತ್ ಶಾ ಜೊತೆ ಒಪ್ಪಂದ ಆಗಿದೆ. ಅದಕ್ಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರ ಪಾಪುಲ್ಯರಿಟಿ ಸಹಿಸಲಾಗದೇ ಕುಮಾರಸ್ವಾಮಿಯವರು ಹತಾಶರಾಗಿದ್ದಾರೆ.
ಹೀಗಾಗಿ ದಿನ ಬೆಳಗಾದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆಂದರು.