ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಕೈಂಕರ್ಯಗಳು ಜರಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಕರ್ನಾಟಕ ಸಾರಿಗೆ ನಿಗಮ ಬಸ್ಸುಗಳನ್ನು ಹೆಚ್ಚುವರಿ ಸಂಖ್ಯೆಯಲ್ಲಿ ಬಿಡಬೇಕು ಎಂಬುದು ಸಾರ್ವಜನಿಕ ಭಕ್ತಾದಿಗಳ ಆಶಯವಾಗಿದೆ.
ತಾಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಭೀಮನ ಅಮಾವಾಸ್ಯೆ ಪ್ರಯುಕ್ತ ಇದೆ ತಿಂಗಳ 17ರ ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಅದರಲ್ಲೂ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಭಕ್ತಾದಿಗಳು ಮಾದಪ್ಪನ ಸನ್ನಿಧಿಯ ದರ್ಶನಕ್ಕೆ ಬರುವ ನಿರೀಕ್ಷೆಯಿದೆ.
ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವುದರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು ಹಾಗೂ ವಾರದ ಕೊನೆಯ ದಿನದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದೆ ಈ ನಿಟ್ಟಿನಲ್ಲಿ ಬಸ್ಸುಗಳ ವ್ಯವಸ್ಥೆ ಮಾಡ ಬೇಕಾಗಿದೆ.
ಕಳೆದ ಅಮಾವಾಸ್ಯೆಯಲ್ಲಿ ಮಲೆ ಮಾದಪ್ಪನ ದರ್ಶನಕ್ಕಾಗಿ ಭಕ್ತರು ಗಂಟೆಗಂಟಲೆ ಕಾಯುವ ಪರಿಸ್ಥಿತಿ ಎದುರಾಗಿತ್ತು. ಈ ಬಾರಿ ಭೀಮನ ಅಮಾವಾಸ್ಯೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜಮಾಯಿಸಲಿದ್ದಾರೆ. ಈ ವಿಶೇಷ ದಿನಕ್ಕಾದರೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಭಿವೃದ್ಧಿ ಪ್ರಾಧಿಕಾರದವರು ಮತ್ತು ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದವರು ಈ ಭೀಮನ ಅಮಾವಾಸ್ಯೆ ವಿಶೇಷ ದಿನದಂದು ಹೆಚ್ಚುವರಿ ಬಸ್ಸುಗಳನ್ನು ಬಿಡಬೇಕು ಎಂಬುದು ಸಾರ್ವಜನಿಕ ಭಕ್ತಾದಿಗಳ ಆಶಯವಾಗಿದೆ.
ಭೀಮನ ಅಮವಾಸ್ಯೆ ಪ್ರಯುಕ್ತ ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗದ ವತಿಯಿಂದ ಶ್ರೀ ಮ. ಮಹದೇಶ್ವರ ಬೆಟ್ಟಕ್ಕೆ ಮೂರು ದಿನಗಳ ಜಾತ್ರಾ ಕಾಯ೯ಚರಣೆಯನ್ನು ಈ ದಿನ ಪ್ರಾರಂಭಿಸಿದ್ದು, ವಿವಿಧ ಡಿಪೋ ವಿಭಾಗಗಳಿಂದ ( ಸಿ.ಜೆ.ಆರ್, ಎಂ.ವೈ. ಎಸ್, ಎಂ.ಡಿ.ವೈ, ಆರ್.ಎಂ.ಎನ್, ಬಿ.ಸಿ.ಡಿ, ಎಚ್.ಎಸ್.ಎನ್ ) ಒಟ್ಟು 300 ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮುಖ್ಯ ಸ್ಥಳಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳನ್ಬು ನಿಯೋಜಿಸಿ ಮಾನಿಟರ್ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಜರುಗಿಸಲಾಗಿದೆ. ಜಿಲ್ಲಾ ಸಾರಿಗೆ ಅಧಿಕಾರಿ ಚಂದ್ರಶೇಖರ್ ತಿಳಿಸಿದಾರೆ.