ಮಂಡ್ಯ: ನಗರಸಭೆಯ ಅಧಿಕಾರವನ್ನು ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ತೀವ್ರ ಪೈಪೆÇೀಟಿ ನಡುವೆ ಮಂಡ್ಯ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.ಜೆಡಿಎಸ್ ನ ಬೆಂಬಲಿತ ಅಭ್ಯರ್ಥಿಗಳಾದ ನಾಗೇಶ್ ಅಧ್ಯಕ್ಷರಾಗಿ, ಅರುಣ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಒಂದು ಮತ ಅಂತರದಿಂದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಗೆ ಭರ್ಜರಿ ಗೆಲುವು. ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿಗೆ ಭಾರಿ ಮುಖಭಂಗ. ಚಲುವರಾಯಸ್ವಾಮಿಗೆ ಟಕ್ಕರ್ ಕೊಟ್ಟ ಎಚ್ ಡಿ ಕುಮಾರಸ್ವಾಮಿ.ನಗರಸಭೆಯಲ್ಲಿ ಪ್ರಸ್ತುತ ಜೆಡಿಎಸ್ 18, ಕಾಂಗ್ರೆಸ್ 10, ಪಕ್ಷೇತರರು- 5, ಬಿಜೆಪಿಯ 2 ಸದಸ್ಯರು ಸೇರಿದಂತೆ ಒಟ್ಟು 35 ಸದಸ್ಯರು ಇದ್ದಾರು.ಎರಡೂ ಬಣದವರು ಪ್ರತ್ಯೇಕ ವಾಹನಗಳಲ್ಲಿ ನಗರಸಭೆ ಆವರಣಕ್ಕೆ ಬಂದ ಸಂದರ್ಭ ತೀವ್ರ ನೂಕುನುಗ್ಗಲು ಉಂಟಾಯಿತು. ಕಾಂಗ್ರೆಸ್ ಸದಸ್ಯರ ವಾಹನವನ್ನು ಶಾಸಕ ರವಿಕುಮಾರ್ ಅವರ ನೇತೃತ್ವದಲ್ಲಿ ಆವರಣದೊಳಕ್ಕೆ ಕರೆತರಲಾಯಿತು.ನಂತರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರಿ ಕಾರಿನಲ್ಲಿ ಆಗಮಿಸಿದರು. ಅವರ ಹಿಂದೆಯೇ ಬರುತ್ತಿದ್ದ ಜೆಡಿಎಸ್ ಸದಸ್ಯರ ವಾಹನವನ್ನು ಗೇಟಿನ ಬಳಿ ತಡೆ ಹಿಡಿಯಲಾಯಿತು.ಇದರಿಂದ ಕೆಲಕಾಲ ಪೆÇಲೀಸರು ಮತ್ತು ಜೆಡಿಎಸ್ ಬೆಂಬಲಿಗರ ನಡುವೆ ವಾಗ್ವಾದ ಮತ್ತು ನೂಕುನುಗ್ಗಲು ಉಂಟಾಯಿತು.ಇದರಿಂದ ಬೇಸತ್ತ ಕುಮಾರಸ್ವಾಮಿ ಸ್ವತಃ ಗೇಟಿನ ಬಳಿ ತೆರಳಿ ಸದಸ್ಯರ ವಾಹನವನ್ನು ಪೆÇಲೀಸರ ಭದ್ರತೆಯಲ್ಲಿ ಆವರಣದೊಳಕ್ಕೆ ಕರೆ ತರುವಲ್ಲಿ ಯಶಸ್ವಿಯಾದರು. ಈ ಮಧ್ಯೆ ಶಾಸಕ ರವಿಕುಮಾರ್ ಅವರು ಜೆಡಿಎಸ್ ಸದಸ್ಯರ ಬಳಿಗೆ ಅವರ ಪೆÇೀಷಕರನ್ನು ಮಾತನಾಡಿಸಲು ಬಿಡುವಂತೆ ಆಗ್ರಹಿಸಿದರು.ಇದಕ್ಕೆ ಅವಕಾಶ ನೀಡದ ಪೆÇಲೀಸರು ಜೆಡಿಎಸ್ ಸದಸ್ಯರನ್ನು ನಗರಸಭೆಯ ಸಭಾಂಗಣದೊಳಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು. ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಯಿತು.