ಬೆಂಗಳೂರು: ಏಕಮುಖ ಹಾಗೂ ಫುಟ್ಪಾತ್ ರಸ್ತೆಗಳಲ್ಲಿಅಡ್ಡಾದಿಡ್ಡಿ ವಾಹನ ಚಲಾಯಿಸಿ ನಾಗರಿಕರ ಜೀವಕ್ಕೆ ಸಂಚಕಾರ ತರುತ್ತಿರುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತಂತ್ರಜ್ಞಾನದ ಮೂಲಕವೇ ಕೇಸ್ ದಾಖಲಿಸಿ ದಂಡ ವಿಧಿಸಲಾಗುತ್ತಿತ್ತು. ಆದರೆ, ದ್ವಿಚಕ್ರವಾಹನ ಸವಾರರ ನಿಯಮ ಉಲ್ಲಂಘನೆ ಹೆಚ್ಚಾಗಿರುವ ಕಾರಣ ಪೊಲೀಸರು ರಸ್ತೆಯಲ್ಲಿಯೇ ಕೇಸ್ ದಾಖಲಿಸಿ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಜುಲೈ 1ರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ದಂಡ ವಿಧಿಸುವ ವಿಶೇಷ ಕಾರ್ಯಾಚರಣೆ ಆರಂಭಗೊAಡಿದೆ.
ನಗರದಲ್ಲಿ ಮೂರು ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳ ವಿಶ್ಲೇಷಣೆಯಲ್ಲಿ ವಾಹನ ಸವಾರರು ಫುಟ್ಪಾತ್, ಒನ್ವೇ ರಸ್ತೆಗಳಲ್ಲಿವಾಹನ ಚಲಾಯಿಸಿದ ಪರಿಣಾಮ ಅಪಘಾತಗಳು ಸಂಭವಿಸಿದ್ದು, ಪಾದಚಾರಿಗಳು ಪ್ರಾಣ ಕಳೆದುಕೊಂಡಿರುವುದು ಕಂಡು ಬಂದಿದೆ. ಜತೆಗೆ, ಇತ್ತೀಚೆಗೆ ಬೈಕ್ ಸವಾರರ ಸಂಚಾರ ನಿಯಮ ಉಲ್ಲಂಘನೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹತ್ತು ದಿನಗಳ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ತಿಳಿಸಿದರು.
ಸ್ಥಳದಲ್ಲಿಯೇ ಕೇಸ್/ ದುಬಾರಿ ದಂಡ
ನಗರದಲ್ಲಿ ಪೀಕ್ ಅವರ್ ಹೊರತುಪಡಿಸಿ ಉಳಿದ ಸಮಯದಲ್ಲಿ ಏಕಮುಖ ರಸ್ತೆ, ಫುಟ್ಪಾತ್ ಮೇಲೆ ವಾಹನ ಸಂಚಾರ, ವಾಹನ ಪಾರ್ಕಿಂಗ್, ಸಿಗ್ನಲ್ ಜಂಪ್ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸ್ಥಳದಲ್ಲಿಯೇ ಕೇಸ್ ದಾಖಲಿಸಿ ಕ್ರಮ ಜರುಗಿಸಲಾಗುತ್ತಿದೆ. ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗದAತೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಾಚರಣೆ ನಡೆಸುವ ಸಿಬ್ಬಂದಿ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಲಿದ್ದಾರೆ. ಹೀಗಾಗಿ, ನಿಯಮ ಉಲ್ಲಂಘಿಘಿಸುವ ವಾಹನ ಸವಾರರ ವಿರುದ್ಧ ಸಾಕ್ಷ÷್ಯದ ಜತೆಗೆ ಪಾರದರ್ಶಕತೆಯೂ ಇರಲಿದೆ. ಅನಗತ್ಯವಾಗಿ ಸವಾರರಿಗೆ ತೊಂದರೆಯೂ ಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಐಐಟಿಎಂಸ್ ಕ್ಯಾಮೆರಾ ಕಣ್ಣು:
ನಗರದ ಜಂಕ್ಷನ್ಗಳಲ್ಲಿಅಳವಡಿಸಿರುವ ಇಂಟೆಲಿಜೆAಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಐಟಿಎಂಎಸ್) ಯೋಜನೆಯ ಮೂಲಕ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ದಾಖಲಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬAಧ ಈ ವರ್ಷ ಮೇ ಅಂತ್ಯಕ್ಕೆ 35,73,008 ಕೇಸ್ಗಳು ದಾಖಲಾಗಿದ್ದವು. ಈ ಪೈಕಿ 34,53,022 ಕೇಸ್ಗಳು (ಶೇ 96.17) ಐಐಟಿಎಂಸ್ ಯೋಜನೆ ತಂತ್ರಜ್ಞಾನ ಆಧರಿಸಿ ದಾಖಲಾಗಿವೆ. ಆದರೆ, ಐಐಟಿಎಂಎಸ್ ಕ್ಯಾಮೆರಾಗಳಲ್ಲಿ ಫುಟ್ಪಾತ್ ರೈಡಿಂಗ್, ಒನ್ ವೇ ಸಂಚಾರ ಸೆರೆಯಾಗುವುದಿಲ್ಲ. ಹೀಗಾಗಿ, ಪೊಲೀಸರೇ ಗಮನಿಸಿ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
572 ಮಂದಿ ಪಾದಚಾರಿ ಸಾವು
ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ವಾಹನ ಸವಾರರ ಅತಿವೇಗ ಹಾಗೂ ನಿರ್ಲಕ್ಷ÷್ಯ ಚಾಲನೆಯಿಂದ 572 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 2022ರಲ್ಲಿಯೇ 247 ಮಂದಿ ಅಸುನೀಗಿದ್ದಾರೆ. ನಿಗದಿತ ಸ್ಥಳದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಸವಾರರು ಡಿಕ್ಕಿ ಹೊಡೆದ ಪರಿಣಾಮ 156 ಪಾದಚಾರಿಗಳು ಮೃತಪಟ್ಟಿದ್ದು, ಫುಟ್ಪಾತ್ ಮೇಲೆ ಮಲಗಿದ್ದ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಷ್ಟು ಬೀಳುತ್ತೆ ದಂಡ?
ಸAಚಾರ ನಿರ್ಬಂಧವಿರುವ ಒನ್ ವೇ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿದರೆ ಭಾರತೀಯ ಮೋಟಾರು ವಾಹನ ಕಾಯಿದೆ ನಿಯಮ- 115ರ ಅನ್ವಯ ಪೊಲೀಸರು ಕೇಸ್ ದಾಖಲಿಸಿ 500 ರೂ. ದಂಡ ವಿಧಿಸಲಿದ್ದಾರೆ. ಫುಟ್ಪಾತ್ ಮೇಲೆ ವಾಹನ ಚಲಾಯಿಸುವವರಿಗೂ ಇದೇ ದಂಡ ಅನ್ವಯವಾಗಲಿದೆ. ಸಿಗ್ನಲ್ ಜಂಪ್ಗೆ 500 ರೂ., ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಗೆ 1000 ರೂ. ದಂಡ ಬೀಳಲಿದೆ.