ಹನೂರು: ತಾಲೂಕಿನ ಧಾರ್ಮಿಕ ಪುಣ್ಯ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಸುಮಾರು 2. ಕೋಟಿ 38 ಲಕ್ಷ ರೂ. ನಗದು ಹಣ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಕಾರ್ಯವನ್ನು ಶುಕ್ರವಾರ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣೀಜ್ಯ ಸಂಕೀರ್ಣದಲ್ಲಿ ನಡೆಯಿತು.
36 ದಿನಗಳಿಂದ ನಾಣ್ಯಗಳು ಸೇರಿ ಒಟ್ಟು 2. ಕೋಟಿ 38. ಲಕ್ಷ 43 ಸಾವಿರದ 177 ರೂಪಾಯಿಗಳು ಸಂಗ್ರಹವಾಗಿದೆ. ಬೆಳ್ಳಿ 3.ಕೆ.ಜಿ 173 ಗ್ರಾಂ. ಹಾಗೂ ಚಿನ್ನ 63 ಗ್ರಾಂ. ಸಂಗ್ರಹವಾಗಿವೆ.
ಅಮಾವಾಸ್ಯೆ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲೆ ಮಾದಪ್ಪನ ಭಕ್ತರು ಬೆಟ್ಟಕ್ಕೆ ಆಗಮಿಸಿ ಹರಕೆ ಪೂಜೆಗಳನ್ನು ಸಲ್ಲಿಸಿರುವ ಭಕ್ತರು ಹುಂಡಿಗೆ ಹಾಕಿರುವ ಕಾಣಿಕೆ ಹಣ ಇದಾಗಿದ್ದು. ದಿನಾಂಕ 27 /7 /2023ರಿಂದ ದಿನಾಂಕ 31 /8 /2023ರ ವರೆಗಿನ 36 ದಿನಗಳಲ್ಲಿನ ಹುಂಡಿ ಹಣ ಎಣಿಕೆ ಮಾಡಲಾಗಿದೆ.
ಮಹದೇಶ್ವರ ಬೆಟ್ಟ ಬಸ್ ನಿಲ್ದಾಣದ ಹತ್ತಿರ ಇರುವ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಸಿಸಿ ಕ್ಯಾಮೆರಾ ಕಣ್ಣಗಾವಲಿನಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಕುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಧರ್ಶಿ ಸರಸ್ವತಿ, ಉಪ ಕಾರ್ಯದರ್ಶಿ ಚಂದ್ರಶೇಖರ್, ಹಾಗೂ ದೇವಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.