ಮೈಸೂರು: ಜಿಲ್ಲಾದ್ಯಂತ 3138 ಮಂದಿಗೆ ಪರೀಕ್ಷೆ.ಆ ಪೈಕಿ 496 ಮಂದಿಗೆ ಡೆಂಗ್ಯೂ ದೃಢ. ಈ ಬಗ್ಗೆ ಮಾಹಿತಿ ನೀಡಿದ ಡಿಹೆಚ್ ಓ.ಪಿ.ಸಿ.ಕುಮಾರಸ್ವಾಮಿ ಹೇಳಿಕೆ.ಜನವರಿಯಿಂದ ಜುಲೈ 8 ರವರಗೆ 496 ಕೇಸ್ ದಾಖಲು.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಘಿ ಸಂಖ್ಯೆ ಹೆಚ್ಚಾಗಿದೆ ಶೇ.11ರಷ್ಟು ಪ್ರಕರಣಗಳು ಈವರಗೆ ದಾಖಲಾಗಿದೆ.
ಒಬ್ಬರು ಮೃತಪಟ್ಟಿದ್ದಾರೆ, ಇನ್ನೊಬ್ಬರ ಡೆತ್ ಆಡಿಟ್ ನಡೆಯುತ್ತಿದೆ. ಇಂದು ಮಧ್ಯಾಹ್ನ ಸಾವಿನ ಕಾರಣ ತಿಳಿಯಲಿದೆ. ಉಳಿದಂತೆ 14 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಾಮಾನ್ಯವಾಗಿ 2-3 ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ.
ಡೆಂಗ್ಯೂ ನಿಯಂತ್ರಣಕ್ಕೆ ಕೆ.ಆರ್.ಆಸ್ಪತ್ರೆ ಸೇರಿ ಸಮುದಾಯ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲಾಗಿದೆ.
ಟೆಸ್ಟಿಂಗ್ ಕಿಟ್ ಇವೆ:ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಡ್ರಗ್ಸ್ ಸ್ಟಾಕ್ ಇಟ್ಟುಕೊಂಡಿದ್ದೇವೆ.ಸಾರ್ವಜನಿಕರು ಆರೋಗ್ಯದ ಕುರಿತು ನಿರ್ಲಕ್ಷ್ಯ ಮಾಡಬೇಡಿ.ಸ್ವಲ್ಪ ಅನಾರೋಗ್ಯ ಕಂಡುಬಂದರೆ ಆಸ್ಪತ್ರೆಗೆ ಭೇಟಿ ನೀಡಿ.ಎಲ್ಲರ ಆರೋಗ್ಯ ಸುಧಾರಣೆ ಮಾಡುವುದು ನಮ್ಮ ಗುರಿಯಾಗಿದೆ.ಡೆಂಘಿ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.ಡಿಎಚ್ಒ ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿಕೆ.