ಮೈಸೂರು: ಮೈಸೂರಿನ ಕಾಳಿದಾಸ ರಸ್ತೆ 8 ನೇ ಕ್ರಾಸ್ ನ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಟಿಕೆಗೆ ಬಳಸಿಕೊಳ್ಳುತ್ತಿದ್ದ 6 ಯುವತಿಯರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನ ಬಂಧಿಸಿ 9 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ಪಿಐ ಅನೂಪ್ ಮಾದಪ್ಪ,ಪಿಎಸ್ಸೈಗಳಾದ ಪ್ರತಿಭಾ ಜಂಗವಾಡ,ರಾಜು ಕೋನಕೇರಿ ಎಎಸ್ಸೈ ರಾಜು,ಸಿಬ್ಬಂದಿಗಳಾದ ಜೋಸೆಫ್ ನರೋನ್ಹ,ಮಂಜುನಾಥ,ಗುರುಪ್ರಸಾದ್,ಪುರುಷೋತ್ತಮ್,ಅರುಣ್ ಕುಮಾರ್,ಸುಭಾನಲ್ಲಾ ಭಾಲದಾರ,ಪುಟ್ಟಮ್ಮ,ಮಮತ,ಶ್ರೀನಿವಾಸ್ ರವರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ