ಮೇಷ
ಶುಭ ಸುದ್ದಿಯೊಂದು ನಿಮ್ಮ ಪಾಲಿಗೆ ಬರಲಿದೆ. ಮನೆಗೆ ಬರುವ ನೆಂಟರಿಗಾಗಿ ವಿಶೇಷ ಆತಿಥ್ಯ ನೀಡುತ್ತೀರಿ. ಸಾಮಾಜಿಕ ಜೀವನದಲ್ಲಿ ಹೆಚ್ಚು ಚಟುವಟಿಕೆಯಿಂದ ಪಾಲ್ಗೊಳ್ಳುವ ಸಮಯವಿದೆ. ದೂರ ಪ್ರಯಾಣ ಮಾಡದಿರುವುದು ಒಳಿತು. ವ್ಯಾಪಾರಸ್ಥರು, ಉದ್ಯಮಿಗಳು ಹೊಸ ಕೆಲಸ ಆರಂಭಿಸುತ್ತೀರಿ.
ವೃಷಭ
ಆಸ್ತಿ ವ್ಯವಹಾರಕ್ಕೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ, ವೈಯಕ್ತಿಕ, ಕೌಟುಂಬಿಕ ವಿಚಾರಕ್ಕೆ ಅದೃಷ್ಟದ ದಿನ ಇದು. ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ವೃತ್ತಿ-ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಇದ್ದು, ಅದರಿಂದ ಅನುಕೂಲ ಇದೆ. ಒಟ್ಟಾರೆ ಇಂದು ಅದೃಷ್ಟದ ದಿನ.
ಮಿಥುನ
ದಿಢೀರ್ ಹಣಕಾಸು ಆಗಮನ ಆಗುತ್ತದೆ. ನಿಮ್ಮ ಆರ್ಥಿಕ ಸ್ಥಾನ ಮಾನ ಗಟ್ಟಿಯಾಗುತ್ತದೆ. ಉತ್ತಮ ಕಾರ್ಯ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ಹಾಗೂ ಸನ್ಮಾನ ಪಡೆಯುತ್ತೀರಿ. ಸಾಮರ್ಥ್ಯದ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಯಾವುದೇ ವ್ಯವಹಾರವನ್ನು ಕೈಗೆತ್ತಿಕೊಳ್ಳುವ ಮುಂಚೆ ಸಾಧಕ-ಬಾಧಕಗಳನ್ನು ಯೋಚನೆ ಮಾಡಿ.
ಕರ್ಕಾಟಕ
ಸರಕಾರದ ಜತೆಗಿನ ಮಾತುಕತೆ, ಕಂಪನಿಗಳ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಶಸ್ಸು ಇದೆ. ಉನ್ನತಾಧಿಕಾರಿಗಳಿಂದ ಅನುಕೂಲಕರವಾದ ನೆರವು ದೊರೆಯುತ್ತದೆ. ಶುಭ ಸುದ್ದಿ ಕೇಳುವ ಯೋಗ ಇದೆ. ಅನಿವಾರ್ಯ ಅಲ್ಲದಿದ್ದರೆ ದೂರ ಪ್ರಯಾಣ ಮಾಡಬೇಡಿ.
ಸಿಂಹ
ಷೇರು ಅಥವಾ ಸಟ್ಟಾ ವ್ಯವಹಾರಗಳಿಗೆ ಇಂದು ಸೂಕ್ತ ದಿನವಲ್ಲ. ಟ್ರಾವೆಲ್ ವ್ಯವಹಾರ ಮಾಡುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ವಾಹನದ ನಿರ್ವಹಣೆಗೆ ಹೆಚ್ಚಿನ ಹಣ ಖರ್ಚಾಗಬಹುದು. ಸಿಟ್ಟು ಮಾಡಿಕೊಳ್ಳಬೇಡಿ. ಮಾತಿನ ಮೇಲೆ ಹಿಡಿತ ಇರಲಿ.
ಕನ್ಯಾ
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ದಿನ ಸಂಬಂಧಿಕರ ಜತೆಗೆ ಉತ್ತಮ ಸಮಯ ಕಳೆಯುತ್ತೀರಿ. ಬಾಳಸಂಗಾತಿ ಜತೆಗೆ ಉತ್ತಮ ಸಂಬಂಧ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಮಾನಸಿಕ ಒತ್ತಡ ಆಗುತ್ತದೆ.
ತುಲಾ
ಆರಂಭದಲ್ಲಿ ವಿಘ್ನ ಅನುಭವಿಸಿದ್ದರೆ ಈ ದಿನ ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ವಿಚಾರಗಳು ನಿಮ್ಮ ಪರವಾಗಿ ಬರುತ್ತವೆ. ಆದರೆ ಆರ್ಥಿಕ ಸಮಸ್ಯೆ ಕಾರಣಕ್ಕೆ ಅಂದುಕೊಂಡಂತೆ ಕೆಲಸ ಸಾಗುವುದಿಲ್ಲ. ಆದರೆ ವ್ಯಾಪಾರಿಗಳು- ಉದ್ಯಮಿಗಳಿಗೆ ಬಾಕಿ ಹಣ ಬರುತ್ತದೆ.
ವೃಶ್ಚಿಕ
ಭೂಮಿ-ಆಸ್ತಿ ಖರೀದಿ, ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದಂತೆ ಉತ್ತಮ ದಿನ. ವೃತ್ತಿ ಹಾಗೂ ವ್ಯಾಪಾರದಲ್ಲೂ ಪ್ರಗತಿ ಇದೆ. ಮನೆಯಲ್ಲಿರುವ ಹಿರಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ನಿಮ್ಮ ಉತ್ಸಾಹ ಇಂದು ಹೆಚ್ಚಿರುತ್ತದೆ. ಅದನ್ನು ಉದ್ಯೋಗದಲ್ಲಿ ಸಾಧನೆ ಮಾಡಲು ಬಳಸಿ.
ಧನು
ಪಾಲುದಾರಿಕೆ ವ್ಯವಹಾರಗಳಿಗೆ ಇಂದು ಸೂಕ್ತ ದಿನವಲ್ಲ. ಆರೋಗ್ಯ ಸಮಸ್ಯೆ ಎದುರಾಗಲಿದೆ. ಯಾರ ಜತೆಗೂ ವಾಗ್ವಾದ ನಡೆಸಬೇಡಿ. ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಎದುರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಲೇಬೇಕು.
ಮಕರ
ಪಾಲುದಾರಿಕೆ ವ್ಯವಹಾರಕ್ಕೆ ಹಾಗೂ ಪ್ರಯಾಣಕ್ಕೆ ಸೂಕ್ತ ದಿನ. ಆದಾಯದಲ್ಲಿ ಹೆಚ್ಚಳ ಆಗಲಿದೆ. ಯಾವುದೇ ವಿಚಾರದಲ್ಲಿ ನಾನು ಮಾಡಿದ್ದೇ ಸರಿ ಎಂಬ ಧೋರಣೆ ಬೇಡ. ಪ್ರಮುಖ ತೀರ್ಮಾನ ತೆಗೆದುಕೊಳ್ಳಬೇಡಿ. ಮಧ್ಯಾಹ್ನದ ನಂತರ ಕಾರ್ಯದ ಒತ್ತಡ ಬೀಳುತ್ತದೆ.
ಕುಂಭ
ಸೇವಾ ವಲಯದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಉತ್ತಮ ದಿನ. ಆರ್ಥಿಕ ಅಗತ್ಯಗಳಿಗೆ ಸಂಬಂಧಿಕರನ್ನು ನೆಚ್ಚಿಕೊಂಡರೆ ಉಪಯೋಗವಿಲ್ಲ. ಭೂಮಿ-ಆಸ್ತಿ ಖರೀದಿ ವ್ಯವಹಾರದಲ್ಲಿ ಪ್ರಗತಿ ಇದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರುತ್ತದೆ. ಸರಕಾರಿ ಕೆಲಸಗಳಲ್ಲಿ ಅನುಕೂಲ ಇದೆ.
ಮೀನ
ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯಾಜ್ಯಗಳಿದ್ದರೆ ಬಗೆಹರಿಸಿಕೊಳ್ಳಲು ಸೂಕ್ತ ದಿನ. ನಿಮ್ಮ ಶ್ರಮಕ್ಕೆ ಗೌರವ-ಮನ್ನಣೆ ದೊರೆಯುತ್ತದೆ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಲು ಹಲವು ಅವಕಾಶ ದೊರೆಯುತ್ತದೆ. ಅನಿವಾರ್ಯ ಅಲ್ಲದಿದ್ದರೆ ಪ್ರಯಾಣ ಮಾಡದಿರುವುದು ಒಳಿತು.