ಮೇಷ: ಸರ್ಕಾರದ ಕೆಲಸವಾಗದೇ ಅಧಿಕ ಓಡಾಟವಾದೀತು. ಆರ್ಥಿಕ ನೆರವನ್ನು ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ನಿಮ್ಮ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ಮಕ್ಕಳಿಗೆ ಸಂಪತ್ತನ್ನು ಹಂಚುವ ಯೋಚನೆ ಇರಲಿದೆ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದವಾಗುವಂತೆ ಮಾಡುವಿರಿ. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ಪಕ್ಷಪಾತವನ್ನು ಬಿಟ್ಟು ವ್ಯವಹರಿಸುವುದು ಉತ್ತಮ. ಅಧಿಕ ಶ್ರಮದಿಂದ ನಿಮಗೆ ಮುಕ್ತಿ ಸಿಗಲಿದೆ.
ವೃಷಭ: ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ವಿವಾಹದ ಮಾತುಕತೆಗಳು ಬಿರುಸಿನಿಂದ ನಡೆಯಲಿದೆ. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಪತ್ನಿಯ ಬಗ್ಗೆ ನಿಮಗೆ ಗೌರವವು ಕಡಿಮೆ ಆಗಬಹುದು. ವಿದೇಶದ ಸಂಪರ್ಕದಿAದ ನಿಮಗೆ ಅನನುಕೂಲವಾಗಲಿದೆ. ನಿಮ್ಮ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಕೋಪಕ್ಕೆ ಕಾರಣವನ್ನು ನೀವು ವ್ಯಕ್ತಿಪಡಿಸಲು ಇಚ್ಛಿಸುವುದಿಲ್ಲ. ಸಂಪತ್ತಾಗಿ ಅನ್ಯ ವೃತ್ತಿಯನ್ನು ಆಶ್ರಯಿಸಬೇಕಾದೀತು. ವಾತಾವರಣದಿಂದ ನಿಮಗೆ ಕಷ್ಟವಾದೀತು. ದೂರಪ್ರಯಾಣವನ್ನು ನಿಷೇಧ ಮಾಡಿ.
ಮಿಥುನ: ಸ್ನೇಹಿರಿಂದ ನಿಮಗೆ ಬಹುಮಾನ ಸಿಗಲಿದೆ. ಸಮಾಜಮುಖೀ ಕೆಲಸದಿಂದ ನಿಮಗೆ ಗೌರವವು ಸಿಗಲಿದೆ. ಮಕ್ಕಳ ಯಶಸ್ಸಿನಿಂದ ಪೋಷಕರಿಗೆ ಸಂತಸವಾಗಲಿದೆ. ವಾಹನ ಚಲಿಸುವಾಗ ಜಾಗರೂಕತೆ ಮುಖ್ಯವಾಗಲಿದೆ. ವ್ಯಾಪರದಲ್ಲಿ ಮಧ್ಯವರ್ತಿಗಳ ಮೇಲೆ ಒಂದು ಕಣ್ಣಿರಲಿ. ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಬಗ್ಗೆ ಜನರ ಅಭಿಪ್ರಾಯವನ್ನು ಪಡೆಯಲು ಇಚ್ಛಿಸುವಿರಿ. ವಿದೇಶದಲ್ಲಿ ಇದ್ದರೆ ನಿಮಗೆ ಸಂಕಷ್ಟವು ಬರಬಹುದು. ಉತ್ತಮ ಆಹಾರವನ್ನು ಪಡೆಯಲು ಯತ್ನಿಸಿ. ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡಿ. ನಿಮ್ಮ ಬಗ್ಗೆ ಇರುವ ಸುಳ್ಳು ಸುದ್ದಿಯನ್ನು ಸರಿಪಡಿಸಿಕೊಳ್ಳಿ.
ಕಟಕ: ಸಂಗಾತಿಯನ್ನು ನೀವು ಅವಮಾನಸಲಿದ್ದೀರಿ. ಇದರಿಂದ ನಿಮಗೆ ಮುಂದೆ ತೊಂದರೆಯಾಗಬಹುದು. ಆಹಾರದಲ್ಲಿ ಪಥ್ಯವನ್ನು ಇಟ್ಟುಕೊಳ್ಳಬೇಕಾದೀತು. ಆರ್ಥಿಕಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಕುಟುಂಬದಲ್ಲಿ ಐಕಮತ್ಯವಿರಲಿ. ಆತ್ಮೀಯರ ಜೊತೆ ನಿಮ್ಮ ಸಂಬAಧವು ಚೆನ್ನಾಗಿರಲಿದೆ. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವಿರಿ. ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮ ಕುರಿತು ತಂದೆ ತಾಯಿಯರು ಚಿಂತಿಸುವರು. ನೀವು ಮಾತಿಗೆ ತಪ್ಪಿದವರು ಎಂಬ ಪಟ್ಟಕ್ಕೆ ಏರುವಿರಿ. ಭೂಮಿಯ ಪ್ರಕರಣವು ನಿಮ್ಮನ್ನು ಚಿಂತೆಗೀಡುಮಾಡೀತು. ನೌಕರರ ಮೇಲೆ ಕಿಡಿಕಾರುವಿರಿ.
ಸಿಂಹ: ಸರ್ಕಾರದಿಂದ ಸೌಲಭ್ಯವನ್ನು ನೀವು ನಿರೀಕ್ಷಿಸುತ್ತಿರುವಿರಿ. ಯಶಸ್ಸನ್ನು ಒಡೆಯುವ ಹಂಬಲವು ಅಧಿಕವಾಗುವುದು. ಪ್ರತ್ಯಕ್ಷವಾಗಿ ಕಂಡಿದ್ದನ್ನು ಹಾಗೆಯೇ ಹೇಳುವುದು ಬೇಡ. ಅವಶ್ಯಕತೆಗೆ ಅನುಸಾರವಾಗಿ ಮುಂದುವರಿಯಿರಿ. ಸ್ನೇಹಿತರಿಗೆ ಸಾಲವಾಗಿ ಹಣವನ್ನು ಕೊಡುವಿರಿ. ಸಾಮಾಜಿಕ ತಾಣದಲ್ಲಿ ನಿಮಗೆ ಸ್ತಿçÃಯ ಜೊತೆ ಪ್ರೇಮವು ಉಂಟಾಗಬಹುದು. ಸಹೋದರರು ಹಣಕ್ಕಾಗಿ ನಿಮ್ಮನ್ನು ಪೀಡಿಸಬಹುದು. ಸಮಯವನ್ನು ವ್ಯರ್ಥ ಮಾಡದೇ ಅಧಿಕಸಂಪಾದನೆಯನ್ನು ಮಾಡುವಿರಿ. ಮನೆಯಲ್ಲಿ ಒಂಟಿಯಾಗಿದ್ದು ನಿಮಗೆ ಭಯವು ಉಂಟಾಗಬಹುದು.
ಕನ್ಯಾ: ಹೊಸ ಸಂಬAಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಅಧಿಕ ಆಹಾರವನ್ನು ನೀವು ಸ್ವೀಕರಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ವಾಹನದಿಂದ ಖರ್ಚಾಗಲಿದೆ. ಗೃಹನಿರ್ಮಾಣದ ಭೂಮಿಯ ವಿಚಾರದಲ್ಲಿ ದೂರನ್ನು ದಾಖಲಿಸಬಹುದು. ಇದಕ್ಕಾಗಿ ಓಡಾಟವಾಗಲಿದೆ. ಅವಕಾಶಗಳು ಇಲ್ಲದೇ ನೀವು ಇಂದು ಅಸಮಾಧಾನದಿಂದ ಇರುವಿರಿ. ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಲಿದೆ. ವಿಷ್ಣುಸಹಸ್ರನಾಮದ ಪಠಣವನ್ನು ಮಾಡುವಿರಿ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು.
ತುಲಾ: ಹಣದ ಹರಿವು ಇಂದು ಸ್ವಲ್ಪ ಕಡಿಮೆಯಾಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಮಿತ್ರರ ನಡುವೆ ಬಾಂಧವ್ಯವು ಇರಲಿದೆ. ಕಲಾವಿದರು ದೂರಪ್ರಯಾಣವನ್ನು ಮಾಡುವಿರಿ. ನಿದ್ರೆಯು ಕಡಿಮೆಯಾಗಿ ಕೆಲಸದಲ್ಲಿ ಉತ್ಸಾಹ ಕಡಿಮೆ ಇರಲಿದೆ. ಪ್ರೇಮಿಯ ಜೊತೆ ಈ ದಿನವನ್ನು ಕಳೆಯುವಿರಿ. ಸ್ತಿçÃಸಂಬAಧದ ವಿಷಯದಲ್ಲಿ ನಿಮ್ಮನ್ನು ವಿಚಾರಿಸಬಹುದು. ಯಂತ್ರಗಳ ಮಾರಾಟವನ್ನು ನೀವು ಕಡಿಮೆಮಾಡುವಿರಿ. ನಟರಗೆ ಹೆಚ್ಚಿನ ಉತ್ತಮ ಅವಕಾಶಗಳು ಇರಲಿದೆ. ವ್ಯವಹಾರವನ್ನು ಸರಿಯಾಗಿ ಮಾಡಿಕೊಳ್ಳಿ.
ವೃಶ್ಚಿಕ: ಅಸಾಧ್ಯವನ್ನು ಸಾಧಿಸುವ ಛಲವಿರಲಿದೆ. ಉದ್ಯಮದಲ್ಲಿ ಹಿನ್ನಡೆಯಾಗುವ ಸಂಭವವು ನಿಮಗೆ ಮೊದಲೇ ಗೊತ್ತಾಗಲಿದೆ. ಇಂದು ನೀವು ಸಂಸ್ಥೆಯ ಪ್ರತಿನಿಧಿಯಾಗಿ ಭಾಗವಹಿಸುವಿರಿ. ನಿರಪೇಕ್ಷ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳಬಹುದು. ಇಂದು ನೀವು ಹೊಸ ತಂಡವನ್ನು ಕಟ್ಟಿಕೊಳ್ಳುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಅಸಮಾಧಾನ ಇರಲಿದೆ. ಮಾನಸಿಕ ಕಿರಿಕಿರಿಯು ಕಡಿಮೆ ಇದ್ದು ಸ್ವಲ್ಪ ಹಿತವೆನಿಸುವುದು. ಸಭ್ಯತೆಯನ್ನು ಇಟ್ಟುಕೊಂಡು ಇಂದಿನ ವ್ಯವಹಾರವನ್ನು ಮಾಡಿರಿ. ನೀವು ನಿಮ್ಮ ಸ್ಥಾನಕ್ಕಾಗಿ ಇನ್ನೊಬ್ಬರನ್ನು ದೂಷಿಸುವಿರಿ.
ಧನುಸ್ಸು: ಉತ್ತಮ ಭೂಮಿಯ ಲಾಭವಾಗಲಿದೆ. ಅಪಾಯದಿಂದ ಹೊರಬರಲಿದ್ದೀರಿ. ಧನವ್ಯಯವನ್ನು ನಿಮ್ಮ ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ಅಪರಿಚಿತರಿಗೆ ಇಂದು ಸಹಾಯವನ್ನು ಮಾಡುವಿರಿ. ಕೋಪದ ನಿಯಂತ್ರಣವನ್ನು ಮಾಡಲು ಕಷ್ಟವಾದೀತು. ಸಂಸಾರದಲ್ಲಿ ನಿರಾಸಕ್ತಿಯು ಇರಲಿದೆ. ನಿಮ್ಮ ಸಣ್ಣ ತಪುö್ಪಗಳೂ ದೊಡ್ಡ ರೂಪವನ್ನು ಪಡೆಯಬಹುದು. ನಿಮ್ಮ ಇಷ್ಟದವರ ಭೇಟಿಯಾಗಲಿದೆ. ಕ್ಷಮೆಯನ್ನು ಕೇಳಿದರೆ ನಿರಾಕರಿಸುವುದು ಬೇಡ. ಸೌಲಭ್ಯಗಳಿಂದ ನೀವು ಆಲಸ್ಯವನ್ನು ಬೆಳೆಸಿಕೊಳ್ಳುವಿರಿ. ಮಕ್ಕಳ ಪ್ರೀತಿಯನ್ನು ಸಂಪಾದಿಸುವಿರಿ. ಅನಗತ್ಯ ಖರೀದಿಯನ್ನು ಮಾಡುವಿರಿ.
ಮಕರ: ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಹೆಚ್ಚಿನ ವಿವರಗಳನ್ನು ಅನುಭವಿಗಳ, ತಿಲಕಿದವರಿಂದ ಪಡೆಯಿರಿ. ವಿವಾಹ ಸಮಾರಂಭಕ್ಕೆ ಹೋಗುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳಬಹುದು. ನೀವು ಇಂದು ವಿಜಯದ ಸಂಭ್ರಮದಲ್ಲಿ ಇರುವಿರಿ. ನಿಮಗೆ ಇಂದು ಸಮ್ಮಾನವು ಸಿಗಬಹುದು. ಕೆಲಸವನ್ನು ಏಕಾಗ್ರತೆಯಿಂದ ಮಾಡುವಿರಿ. ನಿಮ್ಮದೇ ಆದ ಮಿತ್ರರ ವೃಂದವನ್ನು ಕಟ್ಟಿಕೊಳ್ಳುವಿರಿ.
ಕುಂಭ: ನೀವು ಕೆಲಸವನ್ನು ಕಳೆದುಕೊಂಡಿರುವುದು ದಾಯಾದಿಗಳಿಗೆ ಸಂತೋಷದ ಸಮಾಚಾರವಾಗಲಿದೆ. ಸಕಾರಾತ್ಮಕ ಆಲೋಚನೆಗಳನ್ನು ನೀವು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ. ನಿಮಗೆ ಬೆಂಬಲದ ಕೊರತೆ ಎದ್ದು ಕಾಣಬಹುದು. ಅಧಿಕ ಖರ್ಚಿನ್ನು ಇಂದು ಮಾಡಬೇಕಾಗಿಬರಬಹುದು. ನಿಮ್ಮ ದುರಭ್ಯಾಸವು ಇತರರಿಗೂ ತಿಳಿಯಬಹುದು. ಭವಿಷ್ಯದಲ್ಲಿ ಬರಬಹುದಾದ ತೊಂದರೆಗಳನ್ನು ನೀವು ಊಹಿಸಿಕೊಂಡು ಚಿಂತೆಪಡುವಿರಿ. ಸಿಕ್ಕಿದ್ದನ್ನು ಜೋಪಾನ ಮಾಡಿಕೊಳ್ಳಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಲೂಬಹುದು. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಸದೀತು.
ಮೀನ: ವಿದ್ಯಾರ್ಥಿಗಳಿಗೆ ಆಭ್ಯಾಸಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾದೀತು. ಪೂರಕ ವಾತಾವರಣ ಕೊರತೆ ಕಾಣುವುದು. ಹೂಡಿಕೆಯನ್ನು ಇನ್ನೊಬ್ಬರ ಒತ್ತಾಯಕ್ಕೆ ಮಾಡುವಿರಿ. ಸಮಾಧಾನವಿಲ್ಲಸಿದ್ದರೂ ಸಮಾಧಾನದಂತೆ ತೋರುವುದು. ಪುಣ್ಯದ ಫಲವನ್ನು ನೀವು ಪಡೆಯುವಿರಿ. ಸಹೋದ್ಯೋಗಿಗಳ ವರ್ತನೆಯು ನಿಮಗೆ ಆಶ್ಚರ್ಯವನ್ನು ಉಂಟುಮಾಡೀತು. ಕೆಲಸವನ್ನು ಬಿಡಬೇಕಾದ ಸಂದರ್ಭವು ಬರಬಹುದು. ನಿಮ್ಮ ಆತ್ಮವಿಶ್ವಾಸಕ್ಕೆ ತೊಂದರೆ ಬರಬಹುದು. ಪೂರ್ಣಮಾಹಿತಿಯ ಕೊರತೆಯನ್ನು ಇಟ್ಟುಕೊಂಡು ನೀವು ಕೆಲಸವನ್ನು ಮಾಡಬೇಕಾದೀತು. ಗ್ರಾಮದೇವರಿಗೆ ವರ್ಷದ ಪೂಜೆಯನ್ನು ಸಲ್ಲಿಸಿ.