ಹಾಸನ : ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ನಗರಸಭೆ ಅಧಿಕಾರಿಯೊಬ್ಬರು ಸಿಕ್ಕಿ ಬಿದಿದ್ದಾರೆ.
ಬುಧವಾರದಂದು ಬೆಳಿಗ್ಗೆ ಪೌತಿಖಾತೆ ಮಾಡಿ ಇ-ಸ್ವತ್ತು ಮಾಡಿಕೊಡಲು ೨೪ ಸಾವಿರ ಲಂಚ ಪಡೆಯುವಾಗ ನಗರಸಭೆ ವಾರ್ಡ್ ಅಧಿಕಾರಿ ದುಬ್ಬೇಗೌಡ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.
ಸಮಾಜಸೇವಕ ಅಕ್ಮಲ್ ಜಾವೀದ್ ಅವರು ತಮ್ಮ ಜಾಗದ ಪೌತಿಖಾತೆ ಮತ್ತು ಇ-ಸ್ವತ್ತು ಮಾಡಿಕೊಡಲು ಹಾಸನ ನಗರಸಭೆ ವಾರ್ಡ್ ಅಧಿಕಾರಿ ದುಬ್ಬೇಗೌಡ ಅವರ ಬಳಿ ಹೋಗಿದ್ದು, ಈ ವೇಳೆ ೨೪ ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಇಷ್ಟವಿಲ್ಲದ ಅಕ್ಮಲ್ ಜಾವೀದ್ ಅವರು ಈ ವಿಚಾರವನ್ನು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದು, ಮೊದಲೆ ನಿರ್ಧರಿಸಿದಂತೆ ಅಕ್ಮಲ್ ಜಾವಿದ್ ಲಂಚ ಕೊಡುವಾಗ ಸಾಕ್ಷಿ ಸಮೇತ ಲೋಕಾಯುಕ್ತ ಇನ್ಸ್ ಪೆಕ್ಟರ್ ಬಾಲು ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಹಿಡಿದಿದ್ದಾರೆ. ತಕ್ಷಣ ಲಂಚ ಪಡೆಯುತ್ತಿದ್ದ ದುದ್ದಬೇಗೌಡರ ಕೈಬೆರಳ ಮುದ್ರವನ್ನು ದಾಖಲಿಸಲಾಯಿತು. ಬೆಳಗಿನಿಂದ ಸಂಜೆವರೆಗೂ ದುಬ್ಬೇಗೌಡರು ಸೇರಿದಂತೆ ಇತರೆ ನಗರಸಭೆ ಅಧಿಕಾರಿಗಳನ್ನು ಬಾಗಿಲು ಹಾಕಿಕೊಂಡು ಪರಿಶೀಲಿಸಿ ಮಹತ್ವದ ದಾಖಲೆಯನ್ನು ಕೊಂಡೊಯ್ಯಲಾಯಿತು. ಇದೆ ವೇಳೆ ನಗರಸಭೆ ಆಯುಕ್ತರಿಂದಲೂ ಮಾಹಿತಿ ಕಲೆಹಾಕಿದರು. ಸಂಜೆ ವೇಳೆಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೂಡ ಆಗಮಿಸಿದರು.
ಲೋಕಾಯುಕ್ತರ ಕಾರ್ಯವೈಕರಿಗೆ ಪ್ರಶಂಸೆಯ ಮಾತುಗಳು ಕೇಳಿ ಬಂದಿದ್ದು, ಇಂತಹ ಲಂಚ ಪ್ರಕರಣಗಳು ಅನೇಕ ಇಲಾಖೆಗಳಲ್ಲಿ ನಡೆಯುತ್ತಿದ್ದು, ಅದರಲ್ಲೂ ಹುಡಾ ಕಛೇರಿಯಲ್ಲಿ ಹೆಚ್ಚಿನ ಲಂಚದ ಹಾವಳಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಇಲ್ಲಿಯೂ ಕೂಡ ಒಂದು ಆಪರೇಷನ್ ಮಾಡುವ ಅಗತ್ಯವಿದೆ ಎಂದು ಮಾಧ್ಯಮದ ಬಳಿ ಮನವಿ ಮಾಡಿದ್ದಾರೆ.