ಪೊಲೀಸ್ ಭದ್ರತೆ ನಡುವೆ ಕುರಾನ್ ಪಠಣ
ಬೇಲೂರು: ನಗರದ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಕ್ಕೆ ಹರಿದು ಬಂದ ಭಕ್ತ ಸಾಗರ ವಿಜೃಂಭಣೆಯಿAದ ದಿವ್ಯ ಗರುಡೋತ್ಸವ ಜರುಗಿತು.
ನಗರದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವದ ಎಂಟನೇ ದಿನದ ದಿವ್ಯ ಗರುಡೋತ್ಸವವು ಸಹಸ್ತಾರು ಭಕ್ತರ ಸಮ್ಮುಖದಲ್ಲಿ ಚೈತ್ರ ಶುದ್ಧ ತ್ರಯೋದಶಿ ಮಖಾ ನಕ್ಷತ್ರಗಳಿಗೆಯಲ್ಲಿ ಏಪ್ರಿಲ್ 3 ರಂದು ರಾತ್ರಿ 12 ಗಂಟೆಗೆ ವಿಜೃಂಭಣೆಯಿAದ ಜರುಗಿತು.
ಗರುಡೋತ್ಸವಕ್ಕೆ ಬೇಲೂರು ಪಟ್ಟಣದ ಗಾಣಿಗರ ಯುವಕರ ಸಂಘ ಮತ್ತು ಬೇಲೂರು ತಾಲೂಕು ಯಾದವ ಸಂಘದ ವತಿಯಿಂದ ಶ್ರೀ ಚನ್ನಕೇಶವ ಮತ್ತು ಗರುಡ ದೇವರಿಗೆ ಬೃಹತ್ ಹೂವಿನ ಹಾರಗಳನ್ನು ಅರ್ಪಿಸಿ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಮಾಡಲಾಯಿತು.
ದಿವ್ಯ ಗರುಡೋತ್ಸವದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾಗರದಂತೆ ಹರಿದು ಭಕ್ತ ಸಾಗರದ ನಡುವೆ ದಿವ್ಯ ಗರುಡೋತ್ಸವವು ದೇವಾಲಯದ ಎಂಟು ರಥದ ಬೀದಿಗಳಲ್ಲಿ ವೈಭವ ವಿಜೃಂಭಣೆಯಿAದ ಮಂಗಳವಾದ್ಯದೊAದಿಗೆ ಸಾಗಿತು.
ಇದೇ ಸಂದರ್ಭದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲತಾ. ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ನಾರಾಯಣಸ್ವಾಮಿ. ದೇವಾಲಯ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್. ನಾಗರಾಜ್ ಭಟ್. ಸದಸ್ಯರಾದ ವಿಜಯಲಕ್ಷಿ÷್ಮ. ರವಿಶಂಕರ್. ನಾಡಗೌಡರು. ಅಡ್ಡಗಾರರು. ಸೇರಿದಂತೆ ಸಾವಿರಾರು ಭಕ್ತರು ದಿವ್ಯ ಗರುಡೋತ್ಸವವನ್ನು ಕಣ್ತುಂಬಿ ಕೊಂಡರು.