ಚಿಕನ್ ಸಮೋಸಾ ಮಾಡುವುದು ತುಂಬಾ ಸರಳ ಅಂತೆಯೇ ಇದು ಹೆಚ್ಚು ರುಚಿಕರವಾಗಿದೆ ಕೂಡ. ಮೊದಲೇ ಇದಕ್ಕೆ ಬೇಕಾದ ಸಿದ್ಧತೆಯನ್ನು ನೀವು ಮಾಡಿಕೊಂಡಲ್ಲಿ, ಅತಿಥಿಗಳು ಬಂದೊಡನೆ ಬಿಸಿಬಿಸಿ ಸಮೋಸಾವನ್ನು ಚಟ್ನಿಯೊಂದಿಗೆ ಉಣಬಡಿಸಬಹುದು. ಹಾಗಿದ್ದರೆ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
ಸಾಮಾಗ್ರಿಗಳು
- *ಸಣ್ಣದಾಗಿ ಕೊಚ್ಚಿದ ಚಿಕನ್
- 1 ಕಪ್ *ಮೆಣಸಿನ ಹುಡಿ – 1 1/2 ಚಮಚ
- ಗರಮ್ ಮಸಾಲಾ – 1 ಚಮಚ
ಅರಿಶಿನ ಹುಡಿ – 1/2 ಚಮಚ - ಫೆನ್ನಲ್ ಹುಡಿ – 1 ಚಮಚ
- ಕಾಳುಮೆಣಸು – 1/2 ಚಮಚ
- ಕೊತ್ತಂಬರಿ ಹುಡಿ – 2 ಚಮಚ
- ಉಪ್ಪು ರುಚಿಗೆ ತಕ್ಕಷ್ಟು
- *ಹುರಿಯಲು ಬೇಕಾದಷ್ಟು ಎಣ್ಣೆ *ಈರುಳ್ಳಿ – 3 (ಸಣ್ಣದಾಗಿ ಹೆಚ್ಚಿರುವುದು) *ಬೆಳ್ಳುಳ್ಳಿ ಪೇಸ್ಟ್ – 1 ಚಮಚ *ಶುಂಠಿ ಪೇಸ್ಟ್ – 1 1/2 ಚಮಚ *ಹಸಿಮೆಣಸು – 3 (ಸಣ್ಣದಾಗಿ ಕತ್ತರಿಸಿಕೊಂಡಿದ್ದು) *ಸಿಲಾಂಟ್ರೊ – 1/4 ಕಪ್ (ಸಣ್ಣದಾಗಿ ಕತ್ತರಿಸಿಕೊಂಡಿದ್ದು) *ಮೊಟ್ಟೆ – 1 *ಮೈದಾ – 2ಕಪ್ *ನೀರು ಬೇಕಾದಷ್ಟು
ಮಾಡುವ ವಿಧಾನ 1 *ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಮತ್ತು ಈರುಳ್ಳಿಯನ್ನು ಇದಕ್ಕೆ ಹಾಕಿ. ಈರುಳ್ಳಿ ಚಿನ್ನದ ಬಣ್ಣಕ್ಕೆ ತಿರುಗಿದ್ದಂತೆ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಇದಕ್ಕೆ ಹಾಕಿ. *ಕೊಚ್ಚಿದ ಚಿಕನ್ ಅನ್ನು ಸೇರಿಸಿ. ಫೆನ್ನಲ್ ಹುಡಿ, ಕಾಳುಮೆಣಸು, ಕೊತ್ತಂಬರಿ ಹುಡಿ, ಅರಿಶಿನ, ಉಪುö್ಪ, ಗರಮ್ ಮಸಾಲಾ, ಮೆಣಸಿನ ಹುಡಿ, ಹಸಿಮೆಣಸು ಮತ್ತು ಸಿಲಾಂಟ್ರೊವನ್ನು ಚಿಕನ್ ಗೆ ಹಾಕಿ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. - ಇನ್ನು ಮಿಶ್ರಣವನ್ನು ಪ್ಯಾನ್?ನಲ್ಲಿ ಬೇಯಿಸಿಕೊಳ್ಳಿ ಚೆನ್ನಾಗಿ ಬೆಂದ ನಂತರ ಇದನ್ನು ಪಕ್ಕದಲ್ಲಿರಿಸಿಕೊಳ್ಳಿ. ಈಗ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಹಿಟ್ಟನ್ನು ಸಿದ್ಧಪಡಿಸಿ.
- *ಮೈದಾ, ಮೊಟ್ಟೆ, ಸ್ವಲ್ಪ ಉಪ್ಪನ್ನು ಹಿಟ್ಟಿಗೆ ಹಾಕಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿ. ಹಿಟ್ಟಿನಿಂದ ಸಣ್ಣ ಉಂಡೆಯನ್ನು ಸಿದ್ಧಪಡಿಸಿ ಮತ್ತು ಚಪ್ಪಟೆ ಹಾಳೆಗಳಲ್ಲಿ ರೋಲ್ ಮಾಡಿಕೊಳ್ಳಿ. ಚಿಕನ್ ಸ್ಟಫಿಂಗ್ ಅನ್ನು ಹಿಟ್ಟಿನೊಳಗೆ ತುಂಬಿಸಿ. 3. ಹೀಗೆಯೇ ಕೆಲವೊಂದನ್ನು ಮಾಡಿಕೊಳ್ಳಿ, ತಳವಿರುವ ಪ್ಯಾನ್ ಅನ್ನು ತೆಗೆದುಕೊಳ್ಳಿ. ಇದರಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಸಮೋಸಾವನ್ನು ಎಣ್ಣೆಯಲ್ಲಿ ಹುರಿಯಿರಿ. ಎರಡೂ ಬದಿ ಚೆನ್ನಾಗಿ ಹುರಿದುಕೊಳ್ಳಿ ಮತ್ತು ಸಮೋಸಾ ಚಿನ್ನದ ಬಣ್ಣಕ್ಕೆ ಬರುವವರೆಗೆ ಕರಿಯಿರಿ. 4.ಎಣ್ಣೆಯಿಂದ ಹೊರತೆಗೆದ ನಂತರ ಕಿಚನ್ ಟವಲ್?ನಲ್ಲಿ ಅದನ್ನು ತೆಗೆದಿರಿಸಿಕೊಳ್ಳಿ. ಉಳಿದ ಎಣ್ಣೆ ನಿವಾರಣೆಗೊಂಡ ನಂತರ, ಸರ್ವಿಂಗ್ ಪ್ಲೇಟ್?ನಲ್ಲಿ ಸಮೋಸಾವನ್ನು ಇರಿಸಿ ಮತ್ತು ಬಿಸಿಯಾಗಿ ಸೇವಿಸಲು ನೀಡಿ. ಸಾಸ್ ಅಥವಾ ಚಟ್ನಿಯನ್ನು ಸಮೋಸಾದೊಂದಿಗೆ ನೀಡಲು ಮರೆಯದಿರಿ.