ನಂಜನಗೂಡು:- ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಕಪಿಲೇ ನದಿಯ ನೀರು ಇಂದು ತಲುಪಿದೆ.ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಆಗಿರೋದ್ರಿಂದ ನಂಜನಗೂಡಿನ ಪರಶುರಾಮ ದೇವಾಲಯಕ್ಕೆ ಜಲ ದಿಗ್ಬಂದನವಾಗಿದೆ. ಪರಶುರಾಮ ದೇವಾಲಯದ ಸುತ್ತಲೂ ಪ್ರವಾಹದ ನೀರು ಆವರಿಸಿದೆ.ಕೇರಳದ ವೈನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. ಕಬಿನಿ ಜಲಾಶಯದಿಂದ ಹೆಚ್ಚಿನ ಒಳಹರಿವು ಬರುತ್ತಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿ ಕಪಿಲಾ ನದಿಗೆ ಸುಮಾರು 70ಕ್ಕೂ ಹೆಚ್ಚು ಕ್ಯುಸಕ್ ನೀರನ್ನು ಬಿಟ್ಟಿರುವುದರಿಂದ ತಗ್ಗು ಸದಸ್ಯಗಳಾದ ಹಳ್ಳದಕೇರಿ ಒಕ್ಕಲಗೇರಿ ಸರಸ್ವತಿ ಕಾಲೋನಿ ಲಿಂಗಣ್ಣ ಛತ್ರ ಹಲವಾರು ತೋಟಗಳು ನೀರಿನಲ್ಲಿ ಮುಳುಗಡೆಯಾಗಿದೆ ಅನಾಹುತ ಆಗದಂತೆ ತಾಲೂಕು ಆಡಳಿತ ಕ್ರಮ ಕೈಗೊಂಡಿದ್ದಾರೆ ಕಪಿಲಾ ನದಿಯ ಹತ್ತಿರ ಪೆÇಲೀಸ್ ಸೆಕ್ಯೂರಿಟಿ ಗಾರ್ಡ್ ನೇಮಿಸಲಾಗಿದೆ ಯಾರೂ ಕೂಡ ಕಪಿಲ ನದಿಯ ಹತ್ತಿರ ಹೋಗದಂತೆ ಒಳ್ಳೆಯದಂತೆ ಎಚ್ಚರಿಕೆ ವಹಿಸಿದ್ದಾರೆ ತಗ್ಗು ಪ್ರದೇಶದ ಜನಗಳಿಗೆ ದೇವಸ್ಥಾನದ ಹತ್ತಿರ ಸೀತಾರಾಮ ಛತ್ರದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಮಲಗಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಲ್ಲಾ ರೀತಿಯಲ್ಲೂ ಯಾವುದೇ ರೀತಿಯ ಅಡಚಣೆ ತೊಂದರೆ ಉಂಟಾಗದಂತೆ ಮುಂಜಾಗ್ರತೆ ಕ್ರಮ ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.ಕಪಿಲಗೆ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದ ಇಂದು ಕೂಡ ನೀರಿನ ಪ್ರಮಾಣ ಹೆಚ್ಚಾಗಿದ್ದು ಕಪಿಲಾ ನದಿಯ ಪಕ್ಕದಲ್ಲಿರುವ ಅಯ್ಯಪ್ಪ ಸ್ವಾಮಿ ಚಾಮುಂಡೇಶ್ವರಿ ತಾಯಿ ದತ್ತಾತ್ರೇಯ ಸ್ವಾಮಿ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಸುತ್ತ ಡಾರ್ಮೆಟ್ರಿ ಭಕ್ತಿ ಮಾರ್ಗ ಮುಕ್ತಿ ಮಾರ್ಗ ಕಾರ್ ಪಾರ್ಕಿಂಗ್ ಮೈಸೂರು ಮತ್ತು ಊಟಿ ರಸ್ತೆ ಮಲ್ಲನ ಮೂಲೆ ಮಠ ಮುಡಿ ಕಟ್ಟೆ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದೆ.ಇದು ಎರಡನೆಯ ಆಷಾಢ ಶುಕ್ರವಾರ ಪ್ರಯುಕ್ತ ತಾಯಿ ಚಾಮುಂಡೇಶ್ವರಿ ತಾಯಿ ದೇವಸ್ಥಾನ ನೀರಿನಲ್ಲಿ ಮುಳುಗಿರುವ ಕಾರಣ ಭಕ್ತಾದಿಗಳು ಕೂಡ ರಸ್ತೆಯಲ್ಲಿ ನಿಂತು ಪೂಜೆ ಸಲ್ಲಿಸಿದರು.ಎಷ್ಟೇ ನೀರು ಬಂದರೂ ಕೂಡ ತಾಲೂಕಿನದಂತೆ ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ಭಕ್ತಾದಿಗಳು ಬಂದು ಮುಡಿ ಕೊಡುವುದು ತಪ್ಪಲಿಲ್ಲ ಮುಡಿಕಟ್ಟೆ ನೀರಿನಲ್ಲಿ ಮುಳುಗಿದ್ದರು ಕೂಡ ಮುಡಿಕಟ್ಟೆ ಆರ್ಸಿಸಿ ಮೇಲೆ ಸಮಿಯಾನ ಹಾಕಿಕೊಂಡು ಮುಡಿ ತೆಗೆಯುವುದು ಪ್ರಾರಂಭಿಸಿದ್ದಾರೆ.ಶಾಲೆಗಳಿಗೆ ರಜೆ ಬೆಳಗ್ಗೆಯಿಂದಲೇ ಮಳೆ ಪ್ರಾರಂಭವಾಗಿದ್ದು ಶಾಲೆಗಳಿಗೆ ಮಕ್ಕಳು ತೆರಳಲು ಅನಾನುಕೂಲವಾಗಿದೆ ಅದರಿಂದ ತಾಸಿಲ್ದಾರ್ ಶಿವಕುಮಾರ್ ಕಾಸ್ನೂರ್ ಇಂದು ತಾಲೂಕಿನಾದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.