ಮೈಸೂರು: ನವದೆಹಲಿಯ ಸಂಸತ್ ಭವನದಲ್ಲಿ ಆಗಿರುವ ಭದ್ರತಾ ಲೋಪಕ್ಕೆ ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಸಂಸದ ಪ್ರತಾಪಸಿಂಹ ನೇರ ಹೊಣೆಗಾರರಾಗಿದ್ದು, ಅವರ ಮೇಲೆ ತನಿಖೆ ನಡೆಸಬೇಕೆಂದು ಕರ್ನಾಟಕ ದಲಿತ ಪ್ಯಾಂಥರ್ಸ್ ಅಧ್ಯಕ್ಷ ಯೋಗನರಸಿಂಹ ಆಗ್ರಹಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಭವನದಲ್ಲಿ ಯುವಕರು ಅನಿಲ ಗ್ಯಾಸ್ ಸಿಂಪಡಿಸಿ ಭಾರೀ ಭದ್ರತಾ ಲೋಪ ಎಸಗಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆಯಾಗಿದೆ. ಅವರಿಗೆ ಪಾಸ್ ಕೊಟ್ಟ ಮೈಸೂರು ಸಂಸದ ಪ್ರತಾಪಸಿಂಹ ಅವರ ವಿರುದ್ಧ ತನಿಖೆ ನಡೆಸಬೇಕು. ಇನ್ನೂ ಬೇರೆ ವಿಚಾರಗಳ ಬಗ್ಗೆ ಕ್ಷಿಪ್ರಗತಿಯಲ್ಲಿ ಪ್ರತಿಕ್ರಯಿಸುವ ಕೇಂದ್ರ ಸರ್ಕಾರ ಹಾಗೂ ಸಂಸದ ಪ್ರತಾಪಸಿಂಹ ಅವರು ಈ ವಿಚಾರವಾಗಿಯೂ ಪ್ರತಿಕ್ರಯಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗಿರಿ, ಚೆನ್ನಕೇಶವ, ಕಿರಣ್ ಕುಮಾರ್, ಮೋಹನ್, ಅರವಿಂದ್, ಜವರಪ್ಪ, ದೀಪು ಗೋಷ್ಠಿಯಲ್ಲಿದ್ದರು.