ಲಖನೌ: ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ಪತ್ನಿ ಇದ್ದರೂ, ಸರ್ಕಾರಿ ಗೆಸ್ಟ್ಹೌಸ್ನಲ್ಲಿ ಮಹಿಳಾ ಇನ್ಸ್ಪೆಕ್ಟರ್ ಜತೆ ಕಾಲ ಕಳೆಯುವಾಗ ಸಿಕ್ಕಿಬಿದ್ದಿದ್ದಾರೆ. ಪತಿ ಹಾಗೂ ಮಹಿಳಾ ಇನ್ಸ್ಪೆಕ್ಟರ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿಯು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಮನೆಯಲ್ಲಿ ಮುದ್ದಾದ ಮಡದಿ ಇದ್ದರೂ ಹೊರಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಚಾಳಿ ತುಂಬ ಜನರಿಗೆ ಇರುತ್ತದೆ. ಇನ್ನು, ವ್ಯಕ್ತಿಗೆ ಮದುವೆಯಾಗಿದೆ ಎಂಬುದು ಗೊತ್ತಿದ್ದರೂ ಆತನ ಬಲೆಗೆ ಬೀಳುವ ಹೆಣ್ಣುಮಕ್ಕಳು ಇರುತ್ತಾರೆ ಇಲ್ಲವೇ ಹೆಣ್ಣುಮಕ್ಕಳೇ ಆತನನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ.
ಪೆÇಲೀಸ್ ಇನ್ಸ್ಪೆಕ್ಟರ್ ಆಗಿರುವ ವ್ಯಕ್ತಿಯು ಮದುವೆಯಾಗಿದ್ದರೂ, ಮನೆಯಲ್ಲಿ ಪತ್ನಿ ಇದ್ದರೂ, ಆಗ್ರಾದಲ್ಲಿರುವ ಪೆÇಲೀಸ್ ರೆಸ್ಟ್ ಹೌಸ್ನಲ್ಲಿ ಮತ್ತೊಬ್ಬ ಮಹಿಳಾ ಇನ್ಸ್ಪೆಕ್ಟರ್ ಜತೆ ಕಾಲ ಕಳೆಯುತ್ತಿದ್ದರು. ಈ ವಿಷಯ ತಿಳಿದ ವ್ಯಕ್ತಿಯ ಪತ್ನಿಯು ನೇರವಾಗಿ ಸರ್ಕಾರಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ್ದಾರೆ. ಅಲ್ಲಿ, ಪೆÇಲೀಸ್ ಇನ್ಸ್ಪೆಕ್ಟರ್ ಹಾಗೂ ಮಹಿಳಾ ಇನ್ಸ್ಪೆಕ್ಟರ್ ಒಟ್ಟಿಗೆ ಇರುವುದನ್ನು ಕಂಡು ಗಲಾಟೆ ಮಾಡಿದ್ದಾರೆ. ಏನಿದು ಹುಡುಗಾಟ ಎಂದು ಜೋರಾಗಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಇನ್ಸ್ಪೆಕ್ಟರ್ ಪತ್ನಿಯ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ರೆಸ್ಟ್ ಹೌಸ್ನಿಂದ ಇನ್ಸ್ಪೆಕ್ಟರ್ನನ್ನು ಹೊರಗೆ ಎಳೆದ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ನ ಬನಿಯನ್ ಹರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇನ್ನು, ಇನ್ಸ್ಪೆಕ್ಟರ್ ಪತ್ನಿಯೂ ಅಷ್ಟೇ, ಮಹಿಳಾ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೂ ಬೈದಿದ್ದಾರೆ, ರೆಸ್ಟ್ ಆವರಣದಲ್ಲಿಯೇ ಅವರ ಕೈ ಹಿಡಿದು ಎಳೆದಾಡಿದ್ದಾರೆ.
ಮೂಲಗಳ ಪ್ರಕಾರ, ಇನ್ಸ್ಪೆಕ್ಟರ್ ಆಗಿರುವ ಪತಿಯು ಮಹಿಳಾ ಇನ್ಸ್ಪೆಕ್ಟರ್ ಜತೆ ಅಕ್ರಮ ಸಂಬಂಧ ಹೊಂದಿರುವ ಕುರಿತು ಮಹಿಳೆಗೆ ಅನುಮಾನ ಬಂದಿತ್ತು. ಇದೆಲ್ಲ ಸರಿ ಬರುವುದಿಲ್ಲ ಎಂಬುದಾಗಿ ಅವರು ಪತಿಯ ಮನವೊಲಿಸಲು ಯತ್ನಿಸಿದ್ದರು. ಎಷ್ಟು ಹೇಳಿದರೂ, ಮನೆ, ಕುಟುಂಬವನ್ನು ನಿರ್ಲಕ್ಷಿಸಿ, ಮಹಿಳಾ ಇನ್ಸ್ಪೆಕ್ಟರ್ ಜತೆ ಸುತ್ತಾಡುವುದು, ರೆಸ್ಟ್ ಹೌಸ್ಗಳಲ್ಲಿ ಕಾಲ ಕಳೆಯುವುದನ್ನು ಕಂಡು ಮಹಿಳೆಗೆ ರೋಸಿಹೋಗಿತ್ತು. ಕೊನೆಗೆ, ಒಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿದು, ಸರಿಯಾದ ಪಾಠ ಕಲಿಸಿದ್ದಾರೆ ಎಂದು ತಿಳಿದುಬಂದಿದೆ.