ಮೈಸೂರು: ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್ ಕರ್ನಾಟಕದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಬಾರಿಗೆ ನಡೆದಿದ್ದು ವಿಶೇಷ.ಚಾಂಪಿಯನ್ಶಿಪ್ ಅನ್ನು ಹಾಸನ ಜಿಲ್ಲೆ ಗೆದ್ದುಕೊಂಡರೆ ಪ್ರಥಮ ರನ್ನರ್ ಅಪ್ ಅನ್ನು ದಕ್ಷಿಣ ಕನ್ನಡ ಜಿಲ್ಲೆ ಮತ್ತು ದ್ವಿತೀಯ ರನ್ನರ್-ಅಪ್ ಅನ್ನು ಬೆಂಗಳೂರು ಜಿಲ್ಲೆ ಗೆದ್ದುಕೊಂಡಿತು.
ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್ ಲೀಗ್ ಅನ್ನು ಇದೇ ಡಿಸೆಂಬರ್ 23 ಮತ್ತು 24 ರಂದು ಮೈಸೂರು ವಿಶ್ವವಿದ್ಯಾನಿಲಯದ ಸ್ಪೋರ್ಟ್ಸ್ ಪೆವಿಲಿಯನ್ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ಎರಡು ದಿನಗಳ ಮೆಗಾ ಕಾರ್ಯಕ್ರಮವನ್ನು WAKO ಕರ್ನಾಟಕ ಅಧ್ಯಕ್ಷರಾದ ಸಂತೋಷ್ ಆಯೋಜಿಸಿದ್ದರು. ಡಬ್ಲ್ಯು ಎ ಕೆ ಒ(WAKO) ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಶನ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಮಂಜೂರಾದ ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಸಂಘ ಇದನ್ನು ಯಶಸ್ವಿಯಾಗಿ ನಡೆಸಿತು.
ಈ ಲೀಗ್ ನಲ್ಲಿ 10 ಜಿಲ್ಲೆಗಳು ಮತ್ತು 300 ಕ್ಕೂ ಹೆಚ್ಚು ಆಟಗಾರರು, ತರಬೇತುದಾರರು, ತೀರ್ಪುಗಾರರು, ಅಧಿಕಾರಿಗಳು ಮತ್ತು ಪೋಷಕರು ಭಾಗವಹಿಸಿದ್ದರು.ಚಾಂಪಿಯನ್ ಶಿಪ್ ವಿತರಣಾ ಸಮಾರಂಭದಲ್ಲಿ ಮಂಜುಳಾ ಮಾನಸ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪುಷ್ಪಲತಾ ಟಿ. ಬಿ. ಚಿಕ್ಕಣ್ಣ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷೆ, ಸಂತೋಷ್ WAKO ಕರ್ನಾಟಕ ಅಧ್ಯಕ್ಷ, ಕೆ. ಪೂಜಾ ಹರ್ಷWAKO ಭಾರತ ಮಹಿಳಾ ಸಮಿತಿಯ ಅಧ್ಯಕ್ಷೆ, ಹರ್ಷ ಶಂಕರ್ ಏಷ್ಯನ್ ಕಿಕ್ ಬಾಕ್ಸಿಂಗ್ ಕಂಚಿನ ಪದಕ ವಿಜೇತ ಮತ್ತಿತರರು ಹಾಜರಿದ್ದರು.