ಡಾ.ಪ್ರೀತಮ್ ನಾಗಪ್ಪ ಗೆಲುವಿಗೆ ರಾಷ್ಟ್ರ ರಾಜ್ಯ ನಾಯಕರ ಶ್ರೀರಕ್ಷೆ…!!!
ವರದಿ : ಹನೂರು ರವಿ
ಹನೂರು:- ಹನೂರು ವಿಧಾನ ಸಭೆ ಕ್ಷೇತ್ರದಲ್ಲಿ ಈ ಬಾರಿ ಅನುಕಂಪದ ಅಲೆ ಲಿಂಗಾಯಿತ ಸಮುದಾಯದ ಸಂಪೂರ್ಣ ಒಗಟ್ಟಿನ ಬೆಂಬಲದೊಂದಿಗೆ ಇತರ ಎಲ್ಲಾ ಸಮುದಾಯದ ಬೆಂಬಲವೂ ಕೂಡ ಒಮ್ಮತವಾಗಿ ಬಿಜೆಪಿ ಅಭ್ಯರ್ಥಿ ಡಾ|| ಪ್ರೀತಮ್ ನಾಗಪ್ಪ ರವರಿಗೆ ನೀಡುತ್ತಿರುವುದು ವಿಶೇಷವಾಗಿದ್ದು ಈ ಬಾರಿ ಹನೂರಿನಲ್ಲಿ ಕಮಲ ಅರಳುವುದು ಬಹುತೇಕ ನಿಶ್ಚಿತವಾಗಿದೆ.
ಕಳೆದ 2 ದಶಕಗಳಿಂದ ನಾಗಪ್ಪ ಕುಟುಂಬದಿಂದ ರಾಜಕೀಯವಾಗಿ ದೂರ ಉಳಿದಿದ್ದ ಪೊನ್ನಾಚಿ ಗ್ರಾಮದ ಶಿವಬಸಪ್ಪ , ಮತ್ತು ಸೋದರ ಕರಿಕಲ್ಲು ಗಣಿ ಮಾಲೀಕ ಪೊನ್ನಾಚಿ ಮಹಾದೇವಸ್ವಾಮಿ , ಮತ್ತು ಬಳಗ ಸೇರ್ಪಡೆಯಾಗಿದೆ , ಮತ್ತು ಕರಿಕಲ್ಲು ಗಣಿ ಮಾಲೀಕ ವೀರ ಮಾದು ಸೇರ್ಪಡೆ, ಚಂಗವಾಡಿ ರಾಜು, ಹನೂರು ಪಟ್ಟಣ ಪಂ. ಮಾಜಿ ಸದಸ್ಯ ಬಸವರಾಜು ಸೇರಿದಂತೆ ಕ್ಷೇತ್ರದ್ಯಾಂತ ಬಹಳಷ್ಟು ಕಾಂಗ್ರೇಸ್ ಮತ್ತು ಜನತದಳ ಎರಡು ಪಕ್ಷದ ಕಾಯ೯ಕ ತ೯ರು ಗುಂಪುಗಾರಿಕೆಯಿಂದ ಬೇಷತ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಬೆಂಬಲ ನೀಡುತ್ತಿರುವುದು ವಿಶೇಷವಾಗಿದೆ.
ಹನೂರು ತಾಲ್ಲೂಕಿನಲ್ಲಿ ಸೋಮಣ್ಣ ಅಭಿಮಾನಿಗಳ ಬಳಗ ಡಾ. ಪ್ರೀತಮ್ ನಾಗಪ್ಪ ರವರಿಗೆ ಬೆಂಬಲ ನೀಡುತ್ತಿರುವುದು. ಡಾ.ದತ್ತೇಶ್ ಕುಮಾರ್ ಬಳಗ , ಜನಧ್ವನಿ ವೆಂಕಟೇಶ್ ಬಳಗ , ಸಮಾಜ ಸೇವಕ ನಿಶಾಂತ್ ಬಳಗ , ಈ ಮೂವರು ಹನೂರು ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾಗಿದ್ದು ಕೊನೆಯ ಕ್ಷಣದಲ್ಲಿ ಡಾ.ಪ್ರೀತಮ್ ನಾಗಪ್ಪರವರಿಗೆ ಟಿಕೇಟ್ ನೀಡಿದ್ದು ನಂತರ ಈ ಮೂವರು ಬೆಂಬಲ ನೀಡುತ್ತಿರುವುದು ಮತ್ತು ಹೊಣೆ ಒತ್ತಿರುವುದರಿಂದ ಪಕ್ಷದ ಅಭ್ಯರ್ಥಿಯ ಗೆಲುವಿನ ದಾರಿ ಸುಗಮವಾಗಿದೆ.
ದಿವಂಗತ ಎಚ್ ನಾಗಪ್ಪ ಕುಟುಂಬ ಕಳೆದ ಮೂರು ಚುನಾವಣೆಯಲ್ಲೂ ಸೋಲನ್ನು ಕಂಡಿದ್ದು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಪಣತೊಟ್ಟಿರುವ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಹಲವಾರು ಕಾರ್ಯತಂತ್ರಗಳನ್ನು ರೂಪಿಸಿ ಪರ ಭರ್ಜರಿ ಪ್ರಚಾರ ನಡೆಸಿರುವುದು ಗಮನಾರ್ಹ.
ರಾಷ್ಟ್ರ ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ, ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ್, ಯೂತ್ ಐಕಾನ್ ಬಿವೈ ವಿಜಯೇಂದ್ರ, ಚಲನಚಿತ್ರ ನಟ ಕಿಚ್ಚ ಸುದೀಪ್ ಸೇರಿದಂತೆ ದೊಡ್ಡ ಮಟ್ಟದ ಪ್ರಭಾವಿ ನಾಯಕರುಗಳು ಕ್ಷೇತ್ರದ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಭರ್ಜರಿ ಪ್ರಚಾರ ರೋಡ್ ಶೋ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತ ಕ್ಷೇತ್ರದಲ್ಲಿ ಉಳಿದುಕೊಂಡು ಅಭ್ಯರ್ಥಿಯ ಗೆಲುವಿಗಾಗಿ ಸಂಘಟನೆ ಮಾಡುತ್ತಿರುವ ರಾಜ್ಯ ಚುನಾವಣಾ ವಕ್ತಾರ ಬಿಹಾರ ಎಂಎಲ್ಸಿ ದಿಲೀಪ್ ಕುಮಾರ್ ಜೈಸ್ವಾಲ್, ಹನೂರು ಚುನಾವಣೆ ಉಸ್ತುವಾರಿ ಪೊನ್ನು ರಾಧಾಕೃಷ್ಣನ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಓಬಿಸಿ ರಾಷ್ಟ್ರೀಯ ಕಾರ್ಯಕಾರಣ ಸದಸ್ಯ ನೂರೊಂದು ಶೆಟ್ಟಿ, ಬೂದುಬಾಳು ವೆಂಕಟಸ್ವಾಮಿ, ಪಾಳ್ಯ ಜಯಸುಂದ್ರ, ವಕೀಲರು ರಂಗಸ್ವಾಮಿ, ಮಾಧುರಾಜು, ಶಿವಕುಮಾರ್ ಸೇರದಂತೆ ಪ್ರಭಾವಿ ನಾಯಕ ಮುಖಂಡರುಗಳು ಪಕ್ಷಕ್ಕಾಗಿ ದುಡಿದು ಅಭ್ಯರ್ಥಿಯ ಗೆಲುವಿಗೆ ಹಗಲಿರಲು ಶ್ರಮಿಸುತ್ತಿದ್ದಾರೆ.
ಬಸಲಿಂಗಪ್ಪ ಕಾಲೇಜು ಸಂಸ್ಥಾಪಕರಾದ ಕೃಷ್ಣಸ್ವಾಮಿ ರವರ ಪತ್ನಿ ಪ್ರೇಮ ಕೃಷ್ಣಸ್ವಾಮಿ, ಚಲನಚಿತ್ರ ನಟ ನಿರ್ದೇಶಕ ಎಸ್ ಮಹೇಂದರ್, ನಿವೃತ್ತ ಪೊಲೀಸ್ ಅಧಿಕಾರಿ ಪ್ರದೀಪ್ ಕುಮಾರ್, ಕೇಂದ್ರ ಸಚಿವ ಎಲ್.ಮುರುಗನ್, ಮಾಜಿ ಶಾಸಕ ಬಾಲರಾಜು ಇವರು ಸಹ ಕ್ಷೇತ್ರದ ಮತದಾರರನ್ನು ಅಭ್ಯರ್ಥಿಯ ಗೆಲುವಿಗಾಗಿ ಮತಯಾಚಿಸಿ ಗೆಲುವಿಗಾಗಿ ತಮ್ಮದೇ ಆದ ಸಂಘಟನೆಯನ್ನು ಮಾಡುತ್ತಿದ್ದಾರೆ.
ಈ ಬಾರಿ ಹನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲೇ ಬೇಕೆಂಬ ಪ್ರತಿಯೊಬ್ಬ ಕಾರ್ಯಕರ್ತ ಮುಖಂಡರುಗಳ ಪ್ರಯತ್ನದ ಫಲ ಸಫಲವಾಗುವ ನಿರೀಕ್ಷೆಯಲ್ಲಿದ್ದು ಕ್ಷೇತ್ರದ ಮತದಾರರು ಕೂಡ ಈ ಬಾರಿ ಬದಲಾವಣೆಯನ್ನು ಬಯಸಿ ದಿವಂಗತ ಎಚ್ ನಾಗಪ್ಪ ಅವರ ಸುಪುತ್ರ ಡಾಕ್ಟರ್ ಪ್ರೀತಮ್ ನಾಗಪ್ಪ ಅವರ ಮೇಲೆ ಅನುಕಂಪದ ಅಲೆ ಹೆಚ್ಚಾಗಿ ಗೆಲುವಿಗಾಗಿ ಬೆಂಬಲಿಸುತ್ತಿದ್ದಾರೆ. ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದು ಮತದಾರರ ಬೆಂಬಲ ದಿನೇ ದಿನೇ ಹೆಚ್ಚಾಗುತ್ತಿದ್ದು ಬಿಜೆಪಿ ಗೆಲ್ಲುವ ದಾಪುಗಾಲು ಹಾಕುವ ಮುನ್ಸೂಚನೆ ಸಿಗುತ್ತಿದೆ.
ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಡಾ. ಪ್ರೀತಮ್ ನಾಗಪ್ಪನವರ ಪರವಾಗಿ ರಾಜ್ಯ ಚುನಾವಣಾ ವಕ್ತಾರ ಬಿಹಾರ ಎಂಎಲ್ಸಿ ದಿಲೀಪ್ ಕುಮಾರ್ ಜೈಸ್ವಾಲ್, ಹನೂರು ಚುನಾವಣೆ ಉಸ್ತುವಾರಿ ಪೊನ್ನು ರಾಧಾಕೃಷ್ಣನ್, ಕೇಂದ್ರ ಸಚಿವ ಎಲ್. ಮುರುಗನ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಓಬಿಸಿ ರಾಷ್ಟ್ರೀಯ ಕಾರ್ಯಕಾರಣ ಸದಸ್ಯ ನೂರೊಂದು ಶೆಟ್ಟಿ, ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಾ. ಎಸ್. ದತ್ತೇಶ್ ಕುಮಾರ್ , ಜನ ಧ್ವನಿ ವೆಂಕಟೇಶ್ , ಸಮಾಜ ಸೇವಕ ನಿಶಾಂತ್, ರವರುಗಳು ಉಗನಿಯ, ಮದುವನಹಳ್ಳಿ, ದೊಡ್ಡಿಂದುವಾಡಿ, ಹೊಂಡರಬಾಳು , ಲೋಕ್ಕನಹಳ್ಳಿ, ಬೂದಿ ಪಡಗ, ಪಿ.ಜಿ.ಪಾಳ್ಯ, ಒಡೆಯರಪಾಳ್ಯ, ರಾಮಾಪುರ , ಕೌದಳ್ಳಿ ಪೊನ್ನಾಚಿ , ಗೋಪಿನಾಥಂ , ಮಹಾದೇಶ್ವರ ಬೆಟ್ಟ ಹನೂರು ವಿಧಾನ ಸಭೆ ಕ್ಷೇತ್ರದಲ್ಲಿ ಇನ್ನು ಮುಂತಾದ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.