ಮದ್ದೂರು: ಹೋಮಿಯೋಪತಿ ಔಷಧಿಗಳನ್ನು ಬಳಕೆ ಮಾಡುವುದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗದಿರುವ ಜತೆಗೆ ಅತಿಹೆಚ್ಚು ಸುರಕ್ಷಿತವಾಗಿವೆ ಎಂದು ಹೋಮಿಯೋಪತಿ ವೈದ್ಯೆ ಡಾ. ಸಿಂಧು ತಿಳಿಸಿದರು.
ಮದ್ದೂರು ಪಟ್ಟಣದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ, ಆಯುಷ್ಮಾನ್ ಕಚೇರಿ ಸಹಯೋಗದಲ್ಲಿ ಜರ್ಮನಿ ವೈದ್ಯ ಡಾ. ಸಿ.ಎಫ್. ಸ್ಯಾಮುಯಲಲ್ ಹ್ಯಾನಿಮನ್ ರವರ ೨೬೮ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಹೋಮಿಯೋಪತಿ ಚಿಕಿತ್ಸೆಗಾಗಿ ಕೋಟ್ಯಾಂತರ ರೂ. ಅನುದಾನವನ್ನು ಬಿಡುಗಡೆಗೊಳಿಸುತ್ತಿದ್ದು ಹಲವು ರೋಗ ರುಜನಗಳಿಗೆ ಒಳಗಾಗಿರುವ ರೋಗಿಗಳು ಹೋಮಿಯೋಪತಿ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಲಿದ್ದು ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲವೆಂದರು.
ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹಲವು ರೋಗಿಗಳಿಗೆ ಚಿಕಿತ್ಸೆಗಳನ್ನು ನೀಡುತ್ತಿದ್ದು ಮತ್ತು ಇನ್ನಿತರೆ ಪ್ರಾಯೋಗಿಕ ಚಿಕಿತ್ಸೆಗಳನ್ನು ಕೈಗೊಂಡು ದಿನದ ೨೪ ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು ವಿವಿಧ ಗ್ರಾಮಗಳಿಂದ ಹಲವಾರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಉದಾಹರಣೆಗಳು ಸಾಕಷ್ಟಿದ್ದು ಅಂಜಿಕೆ ಹಾಗೂ ಭಯವನ್ನು ಬದಿಗಿಟ್ಟು ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಿ ಹೋಮಿಯೋಪತಿ ಚಿಕಿತ್ಸೆಯಲ್ಲಿ ಪಾಲ್ಗೊಳ್ಳಬೇಕೆಂದರು.
ಈ ವೇಳೆ ವೈದ್ಯರಾದ ನಾಗನಂದನ್, ಕವಿತಾ, ಭಾಗ್ಯಲಕ್ಷ್ಮಿ,ನಾಜಿಯಾ, ಸುಹಾಸಿನಿ, ಲೋಕೇಶ್, ಮುಖಂಡರಾದ ಜಗದೀಶ್, ತ್ರಿವೇಣಿ, ಲಕ್ಷ್ಮಿಸುಂದರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಹೋಮಿಯೋಪತಿಯಿಂದ ಅಡ್ಡಪರಿಣಾಮ ಇಲ್ಲ
![](https://stateroute.in/wp-content/uploads/no-image.jpg)