ಈಗಾಗಲೇ 3 ಬಾರಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ನಟಿ 4ನೇ ಬಾರಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಿಗ್ ಬಾಸ್ ಖ್ಯಾತಿಯ ವನಿತಾ ವಿಜಯ್ಕುಮಾರ್ ಸಿನಿಮಾಗಿಂತ ವೈಯಕ್ತಿಕ ಜೀವನದ ವಿಷ್ಯವಾಗಿ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ.
ತಮಿಳು ನಟಿ ವನಿತಾ ವಿಜಯ್ಕುಮಾರ್ ಅವರದ್ದು ಕಲಾವಿದರ ಕುಟುಂಬ. ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರೋದಕ್ಕಿಂತ ವಿವಾದಗಳ ಮೂಲಕ ಸದ್ದು ಮಾಡಿದ್ದೇ ಜಾಸ್ತಿ. ಮತ್ತೆ ಈಗ ೪ನೇ ಬಾರಿ ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ವರ ಯಾರು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಮದುವೆ ಬಗ್ಗೆ ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ ಎಂದು ವನಿತಾ ಉತ್ತರಿಸಿದ್ದಾರೆ. ಇದು ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಹಾಗಾದ್ರೆ ನಟಿ ಸದ್ಯದಲ್ಲೇ ಗುಡ್ ನ್ಯೂಸ್ ಕೊಡುತ್ತಾರಾ ಕಾಯಬೇಕಿದೆ.
ಅಂದಹಾಗೆ, ವನಿತಾ ಅವರು ೨೦೦೦ರಲ್ಲಿ ಆಕಾಶ್ ಎಂಬುವವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟರು. ಆದರೆ ೨೦೦೫ರಲ್ಲಿ ಡಿವೋರ್ಸ್ ಪಡೆದು ಆಕಾಶ್ ಅವರಿಂದ ದೂರವಾದರು. ನಂತರ ೨೦೦೭ರಲ್ಲಿ ಉದ್ಯಮಿ ರಂಜನ್ ಆನಂದ್ ಎಂಬುವವರ ಜೊತೆಗೆ ವನಿತಾ ಎರಡನೇ ಮದುವೆಯಾದರು. ಆದರೆ ೨೦೧೨ರಲ್ಲಿ ಅವರೊಂದಿಗೂ ಹೊಂದಾಣಿಕೆ ಕೊರತೆಯಿಂದ ದಾಂಪತ್ಯಕ್ಕೆ ಕೊನೆ ಹಾಡಿದರು. ಬಳಿಕ ೨೦೨೦ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್ ಜೊತೆಗಿನ ಮದುವೆ ಕೂಡ ಮುರಿದುಬಿತ್ತು.