ಚಾಮರಾಜನಗರ:- ತಾಲ್ಲೂಕು ಕೇಂದ್ರದಲ್ಲಿ ಯಾವುದಾದದರು ವ್ಯಕ್ತಿ ಸಾವನ್ನಪಿದರೆ ಅಂತಹ ಶವವನ್ನು ಸ್ಮಶಾನದ ವರೆಗೆ ಇಲ್ಲ ಶವಗಾರದ ಹೊರಗೆ ಸಾಗಿಸಲು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ರಾಜ್ಯ ಸರ್ಕಾರ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಿಗೂ ಶ್ರದ್ದಾಂಜಲಿ ವಾಹನವನ್ನು ನೀಡಿದೇ. ಇದರ ಉಪಯೋಗ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಇದೇ. ಇನ್ನಿತರೆ ಭಾಗಗಳಲ್ಲಿ ಚೆನ್ನಾಗಿರುವ ಚಲಿಸುವ ವಾಹನ ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿದೇ.
ಇದಕ್ಕೆ ಉದಾರಣೆ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ಭಾಗವಾದ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಹಿಂಭಾಗದಲ್ಲಿ ಸ್ಥಗಿತವಾಗಿ ತುಕ್ಕು ಹಿಡಿಯುವ ಸ್ಥಿತಿಯಲ್ಲಿ ನಿಂತಿರುವ ಶ್ರದ್ದಾಂಜಲಿ ವಾಹನ ಮತ್ತು 108 ಅಂಬುಲೇಸ್. ಬಡ ಜನರ ಉಪಯೋಗಕ್ಕೆ ವಾಹನ ನೀಡಿದರೆ ಒಂದು, ಎರಡು ದಿನಗಳು ವಾಹÀನ ಓಡಿಸಿ, ಗುಜಿರಿಗೆ ತಳ್ಳುವ ಸಾಂಪ್ರದಾಯ ಅಲ್ಲಿನ ಅಧಿಕಾರಿಗಳದಾಗಿದೆ.
ಜಿಲ್ಲಾ ಆಸ್ಪತ್ರೆಯ ಮುಂದೆ ಖಾಸಗಿ ಆಂಬುಲೇಸ್ಗಳದೇ ಖಾರುಬಾರು 10 ರಿಂದ 15ದರವರೆಗೆ ಖಾಸಗಿ ಅಂಬುಲೇಸ್ಗಳು ಇದ್ದು ಆಸ್ಪತ್ರೆಯ ಅಧಿಕಾರಿಗಳು ಖಾಸಗಿಯವರ ಜೊತೆ ಒಳ ಒಪ್ಪಂದ ಮಾಡಿಕೊಡಿರುವ ಬಗ್ಗೆ ಗುಮಾನಿಯಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ ಸಿಮ್ಸ್ ಆಸ್ಪತ್ರೆಯ ಡೀನ್ ಕ್ರಮ ವಹಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬ ರೋಗಿಯನ್ನು ಖಾಸಗಿ ಅಂಬುಲೇಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲು ಅವರು ಕೇಳಿದ ಹಣವನ್ನೇ ನೀಡಬೇಕು. ಆರೋಗ್ಯ ಇಲಾಖೆಯ ಕಾನೂನು ಪ್ರಕಾರ ಖಾಸಗಿ ಅಂಬುಲೇಸ್ಗಳು ನಿಲ್ಲಿಸಿಕೊಳ್ಳಲು ಅವರು ಸ್ಥಳವನ್ನು ಇಲಾಖೆಗೆ ದಾಖಲು ನೀಡಿರಬೇಕು,
ಚಾಮರಾಜನಗರದ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಅವರ ನಿಲ್ದಾಣವಾಗಿದೆ. ಅಧಿಕಾರಿಗಳಿಗೆ ಮತ್ತು ವೈದ್ಯರುಗಳಿಗೆ ಖಾಸಗಿ ಅಂಬುಲೇಸ್ ರವರು ಕಮೀಷನ್ ನೀಡುತ್ತಿದ್ದಾರೆ ಎಂದು ವದಂತಿಯು ಇದೇ. ಇದನ್ನು ತಡೆಯುವ ಕ್ರಮವನ್ನು ಜಿಲ್ಲಾಧಿಕಾರಿಗಳು ವಹಿಸಬೇಕು. ಚೆನ್ನಾಗಿರುವ ವಾಹನವನ್ನು ತುಕ್ಕು ಹಿಡಿಯಲು ಕಾರಣರಾದ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕೆಂದು ಜನರ ಒತ್ತಾಯವಾಗಿದೆ.